
ಇಂದು ರೈತರ ಪ್ರಗತಿಗಾಗಿ ಸರ್ಕಾರ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರದಿಂದ ರೈತರಿಗೆ ಹಲವು ರೀತಿಯ ಸೌಲಭ್ಯ ದೊರಕುತ್ತಿದೆ. ಅದೇ ರೀತಿ ಪಿಎಂ ಕಿಸಾನ್ ಯೋಜನೆ ಜಾರಿಗೆ ಬಂದಿದ್ದು, ಇದರ ಮೂಲಕ ರೈತರಿಗೆ ಆರ್ಥಿಕ ಸಹಾಯಧನ ನೀಡುತ್ತಿದೆ. ಇದೀಗ ಈ ಯೋಜನೆ ಬಗ್ಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಎಷ್ಟು ಹಣ
ಪಿಎಂ ಕಿಸಾನ್ ಯೋಜನೆ ಮೂಲಕ ಸರ್ಕಾರವು ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ನೀಡುತ್ತಿದ್ದು, ಕಿಸಾನ್ ಕಾರ್ಡ್ ಇದ್ದರೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಹಣವು ರೈತರಿಗೆ ಮೂರು ಕಂತಿನ ಮೂಲಕ ಹಣ ಸಂದಾಯ ಆಗುತ್ತಿದೆ. ಇದು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ
ಹೆಚ್ಚಳ ಮಾಡುವ ಸಾಧ್ಯತೆ
ಇದೀಗ ಈ ಕಿಸಾನ್ ಯೋಜನೆಯ ಹಣ ಹೆಚ್ಚು ಮಾಡುವ ಸಾಧ್ಯತೆ ಇದೆ. ಹೌದು ಹಿಂದಿನ ವರ್ಷದಲ್ಲಿ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ.ಉಳಿಸಿದೆ. ಹಾಗಾಗಿ ಈ ಬಾರಿ ಕಂತಿನ ಪಾವತಿ ಜಾಸ್ತಿ ಮಾಡುವ ನಿರೀಕ್ಷೆ ಕೂಡ ಇದೆ. ಹೌದು ಈ ಬಾರಿ ಪಿಎಂ ಕಿಸಾನ್ ಹಣ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನದಲ್ಲಿ 3000 ರೂ.ವರೆಗೆ ಏರಿಕೆಯಾಗಲಿದೆ ಎನ್ನಲಾಗಿದೆ.
ಲಿಂಕ್ ಮಾಡಿಸಿ
ಪ್ರತಿಯೊಬ್ಬ ರೈತರು ತಮ್ಮ ಖಾತೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿದ್ದು, ಇಕೆವೈಸಿ ಮಾಡದಿದ್ದರೆ ಖಾತೆಗೆ ಹಣ ಜಮೆಯಾಗುವುದಿಲ್ಲ. ಇನ್ನು ಆರ್ಹತೆ ಇಲ್ಲದವರು ಈ ಯೋಜನೆಯ ಸೌಲಭ್ಯ ಪಡೆಯುವಂತಿಲ್ಲ ಎಂದು ಈಗಾಗಲೇ ಕೆಂದ್ರ ಸರ್ಕಾರ ಮಾಹಿತಿ ನೀಡಿದೆ.
ಹಣ ಬಿಡುಗಡೆ
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಬಿಡುಗಡೆಗಾಗಿ ರೈತರು ಈಗಾಗಲೇ ಕಾಯುತ್ತಿದ್ದಾರೆ. 15 ನೇ ಕಂತಿನ ಹಣವೂ ದೀಪಾವಳಿಯ ಮೊದಲು ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈ ಹಿಂದೆಯೂ ಹಲವಾರು ಮಂದಿಗೆ ಪಿಎಂ ಕಿಸಾನ್ ನಿಧಿ ಮೊತ್ತವು ಜಮೆಯಾಗಿಲ್ಲ. ಹೀಗಾಗಿ ಇಕೆವೈಸಿ ಅನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.
ನೀವು ಹಣ ಬಿಡುಗಡೆಯಾಗಿರುವ ಬಗ್ಗೆ ಪಿಎಮ್ ಕಿಸಾನ್ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ ಹಂತ ಪರಿಶೀಲನೆ ಮಾಡಬಹುದಾಗಿದೆ. ಈ ತಿಂಗಳ ಮೊತ್ತವನ್ನು ನವೆಂಬರ್ 12 ರಂದು ದೀಪಾವಳಿಯ ಮೊದಲು ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗುತ್ತದೆ ಎನ್ನಲಾಗಿದೆ.
