Home ಕರ್ನಾಟಕ ವೈರಲ್‌ ಆಗಿರುವ ಗೃಹಲಕ್ಷ್ಮೀ ಯೋಜನೆ ಅರ್ಜಿ ನಕಲಿ: ಸರ್ಕಾರ ಸ್ಪಷ್ಟನೆ

ವೈರಲ್‌ ಆಗಿರುವ ಗೃಹಲಕ್ಷ್ಮೀ ಯೋಜನೆ ಅರ್ಜಿ ನಕಲಿ: ಸರ್ಕಾರ ಸ್ಪಷ್ಟನೆ

ಬೆಂಗಳೂರು:ರಾಜ್ಯ ಸರ್ಕಾರ ಹೊರಡಿಸಿರುವ 5ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಅರ್ಜಿ ಬಿಡುಗಡೆಗೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭಾವಚಿತ್ರಗಳನ್ನೊಳಗೊಂಡ ಅರ್ಜಿ ಎಲ್ಲೆಡೆ ಹರಿದಾಡುತ್ತಿದ್ದು, ಇದು ನಕಲಿ ಅರ್ಜಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಲಾಖೆಯ ನಿರ್ದೇಶನಾಲಯ ಕಚೇರಿಯ ಅಧಿಕಾರಿ, ಗೃಹಲಕ್ಷ್ಮೀ ಯೋಜನೆಯ ಅಧಿಕೃತ ಅರ್ಜಿಯನ್ನು ಇನ್ನು ಬಿಡುಗಡೆಯಾಗಿಲ್ಲ. ಇದೀಗ ವೈರಲ್‌ ಆಗಿರುವ ಅರ್ಜಿ ನಕಲಿ ಎಂದು ಸ್ಪಷ್ಟಪಡಿಸಿದೆ.

 
Previous articleಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಕೊನೆಗೂ ರಿಲೀಸ್
Next articleಇನ್ಮುಂದೆ ಒಂಟಿ ಪೋಷಕ ಪುರುಷ ಸರ್ಕಾರಿ ನೌಕರರಿಗೂ ಸಿಗಲಿದೆ ಶಿಶುಪಾಲನಾ ರಜೆ