
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಎಷ್ಟು ಅನುಕೂಲವಾಗಿದೆಯೋ ಖಾಸಗಿ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಅಷ್ಟೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಉಚಿತ ಬಸ್ ಪ್ರಯಾಣದಿಂದಾಗಿ ಮಹಿಳೆಯರೆಲ್ಲರೂ ಸಕಾರಿ ಬಸ್ ನಲ್ಲಿಯೇ ಓಡಾಡುತ್ತಿರುವುದರಿಂದ ಒಂದೆಡೆ ಪುರುಷ ಪ್ರಯಾಣಿಕರು ಮಹಿಳೆಯರಿಗೆ ವಿಶೇಷ ಬಸ್ ಬಿಡಿ ಎಂದು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಬಸ್ನವರು ಜನ ಇಲ್ಲ ಎಂದು ಒದ್ದಾಡುತ್ತಿದ್ದಾರೆ. ಇದೀಗ ಈ ಯೋಜನೆಯನ್ನು ಜಾರಿಗೊಳಿಸಿರುವುದಕ್ಕೆ ಉತ್ತರ ಕನಾಟಕ ಆಟೋ ಚಾಲಕರ ಸಂಘ ಬೃಹತ್ ಪ್ರತಿಭಟನೆ ನಡೆಸಿದೆ.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಮಿನಿವಿಧಾನಸೌಧದವರೆಗೆ ಜರುಗಿದ್ದು, ಈ ವೇಲೆ ಪ್ರತಿಭಟನಾಕಾರರು ಯೋಜನೆಯ ವಿರುದ್ಧ ಕಿಡಿಕಾರಿದರು. ಕೊರೊನನಾ ಹೊಡೆತದಿಂದ ಸ್ವಲ್ಪ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿರುವ ನಮಗೆ ಈ ಶಕ್ತಿ ಯೋಜನೆಯಿಂದಾಗಿ ಮತ್ತಷ್ಟು ಹೊಡೆತವುಂಟಾಗಿದೆ. ಹೀಗಾಗಿ ಈ ಯೊಜನೆಯನ್ನು ನಗರ ಸಾರಿಗೆ ಹೊರತುಪಡಿಸಿ ಬೇರೆ ಎಲ್ಲಾದರೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಹೇಳಿದ್ದಾರೆ.ಅಲ್ಲದೇ ಇನ್ನೂ ಹಲವಾರು ಬೇಡಿಕೆಗಳನ್ನು ಸಕಾರದ ಮುಂದಿಟ್ಟಿದ್ದು, ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
