ಒಡಿಶಾ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಅನೇಕರು ಕಂಬನಿ ಮಿಡದಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಲವರು ಪರಿಹಾರವನ್ನು ನೀಡಿದ್ದಾರೆ. ಇನ್ನೂ ಕೂಡ ಕೆಲವು ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆ ಮೃತರ ಗುರುತನ್ನು ಕಂಡುಹಿಡಿಯಲು ಡಿಎನ್‌ಎ ಪರೀಕ್ಷೆ ಮಾಡಲು ನಿಧರಿಸಲಾಗಿದೆ.
ಹೌದು, ಬಾಲಸೋರ್ ನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ಸಂಬಂಧಿಕರು ತಮ್ಮವರ ಹುಡುಕಾಟವನ್ನು ಮುಂದುವರಸಿದ್ದಾರೆ. ಈ ನಡುವೆ ಭುವನೇಶ್ವರ ಮುನ್ಸಪಾಲ್ ಕಾಪೋರೇಷನ್ ಸಂದರ್ಶಕರಿಂದ ಸಂಗ್ರಹಿಸಿದ 30 ಡಿಎನ್‌ಎ ಮಾದರಿಗಳನ್ನು ನವದೆಹಲಿಯ ಏಮ್ಸ್ ಗೆ ಕಳುಹಿಸುವುದಾಗಿ ಹೇಳಿದೆ. ಈ ವರದಿಯನ್ನು ಪಡೆಯಲು 7ರಿಂದ 8ದಿನಗಳಾಗಬಹುದು ಎಂದು ಅಂದಾಜಿಸಲಾಗಿದೆ.
ಹಿನ್ನೆಲೆ: ಶುಕ್ರವಾರ ಸಂಭವಿಸಿದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 288ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
