Home ರಾಜ್ಯ ಶಾಲಾ ಪಠ್ಯಕ್ರಮದಲ್ಲಿ ಸೆಪ್ಲಿಮೆಂಟರಿ ಪರಿಷ್ಕರಣೆ: ವಿ.ಡಿ.ಸಾರ್ವರ್ಕರ್ ಇತರೆ ಪಠ್ಯ ಕ್ರಮ ತೆಗೆದ ರಾಜ್ಯ ಸರ್ಕಾರ

ಶಾಲಾ ಪಠ್ಯಕ್ರಮದಲ್ಲಿ ಸೆಪ್ಲಿಮೆಂಟರಿ ಪರಿಷ್ಕರಣೆ: ವಿ.ಡಿ.ಸಾರ್ವರ್ಕರ್ ಇತರೆ ಪಠ್ಯ ಕ್ರಮ ತೆಗೆದ ರಾಜ್ಯ ಸರ್ಕಾರ

ಬೆಂಗಳೂರು: ಈ ವರ್ಷ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಿಲ್ಲ, ಬದಲಾಗಿ ಕೆಲ ವಿವಾದಿತ ಪಠ್ಯ ವಿಷಯಗಳನ್ನ ಬೋಧನೆ ಮಾಡದಂತೆ ಶಿಕ್ಷಕರಿಗೆ ರಾಜ್ಯ ಸಕಾರ ಸುತ್ತೋಲೆ ಹೊರಡಿಸಿತ್ತು. ಈ ನಡುವೆ ಹಿಂದಿನ ಬಿಜೆಪಿ ಪಠ್ಯಕ್ರಮದಲ್ಲಿ ಸೇರಿಸಿದ್ದ ಆರ್‌ಎಸ್‌ಎಸ್‌ ಮುಖಂಡ ವಿ.ಡಿ.ಸಾರ್ವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯವನ್ನು ಕೈಬಿಡಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿಧಾರ ತೆಗೆದುಕೊಂಡಿದ್ದು ಅಗತ್ಯ ಇಲ್ಲದ ಇತರೆ ಪಠ್ಯಗಳನ್ನು ಶಾಲಾ ಪಠ್ಯಪುಸ್ತಕದಿಂದ ಕೈಬಡಲು ತೀರ್ಮಾನಿಸದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಬಾರಿ ಈಗಾಗಲೇ ಶಾಲೆ ಆರಂಭವಾಗಿರುವುದರಿಂದ ಪಠ್ಯ ಪುಸ್ತಕಗಳನ್ನೂ ಕೂಡ ಪೂರೈಕೆ ಮಾಡಲಾಗಿದೆ. ಹೀಗಾಗಿ ಮತ್ತೆ ಪಠ್ಯ ಪುಸ್ತಕ ವಾಪಸ್‌ಪಡೆದು ಪರಿಷ್ಕರಣೆ ಮಾಡಲು ಸಮಯಾವಕಾಶ ಹೆಚ್ಚು ಬೇಕಾಗುತ್ತದೆ. ಆದರೆ ಸೆಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶ ಇರುವ ಕಾರಣ ಯಾವ ಪಠ್ಯ ಕ್ರಮ ಉಳಿಸಿಕೊಳ್ಳಬೇಕೋ ಅದನ್ನು ಉಳಿಸಿಕೊಂಡು ಇತರೆ ಪಠ್ಯಕ್ರಮಗಳನ್ನು ಕೈಬಿಡಲಾಗುವುದು ಎಂದರು.

 
Previous articleನಾಳೆಯಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ
Next articleಶಕ್ತಿ ಯೋಜನೆಗೆ ಮುಂಗಡ ಟಿಕೆಟ್‌ ಬುಕ್ಕಿಂಗ್ಗೆ ಎದುರಾಯ್ತು ಸರ್ವರ್ ಸಮಸ್ಯೆ