
ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದ್ದು, ಪ್ರತಿಯೊಬ್ಬರು ಈ ಕಾರ್ಡ್ ಅನ್ನು ಹೊಂದಿದ್ದಾರೆ. ಹೌದು ಎಪಿಎಲ್ , ಬಿಪಿಎಲ್, ಅಂತ್ಯೋದಯ ಹೀಗೆ ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು, ಬಡವರ್ಗದ ಜನತೆಗೆ ಈ ಬಿಪಿಎಲ್ ಕಾರ್ಡ್ ನೆರವಾಗಲಿದೆ. ಸರ್ಕಾರದಿಂದ ಸಬ್ಸಿಡಿ ಆಧಾರಿತವಾಗಿ ಅಕ್ಕಿ, ಧಾನ್ಯ, ಸೀಮೆ ಎಣ್ಣೆಯನ್ನು ರೇಷನ್ ಕಾರ್ಡ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ರೇಷನ್ ಕಾರ್ಡ್ ಮೂಲಕ ನಾವು ಅಗತ್ಯ ಆಹಾರ ಧಾನ್ಯಗಳನ್ನು ಕಡಿಮೆ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಬಿಪಿಎಲ್ ಅರ್ಜಿ ಹೆಚ್ಚಳ
ಹೊಸದಾಗಿ ಈ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿದವರಲ್ಲಿ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯೇ ಹೆಚ್ಚಾಗಿದ್ದು, ಸೂಕ್ತವಾಗಿ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಜನರ ವೈಯಕ್ತಿಕ ಮಾಹಿತಿ ಆಧಾರದ ಮೇಲೆ ಬಂದಿರುವ ಅರ್ಜಿಗಳನ್ನು ಬೇರ್ಪಡಿಸಿ , ಸರಿಯಾದ ದಾಖಲೆ ಪರಿಶೀಲನೆ ಮಾಡಿ ಸದ್ಯದಲ್ಲೇ ಕಾರ್ಡ್ ವಿತರಣೆ ಮಾಡಲಾಗುವುದು ಎನ್ನಲಾಗಿದೆ.
ಹೊಸ ಕಾರ್ಡ್ ವಿತರಣೆ ಯಾವಾಗ?
ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದಂತಹ ಗ್ರಾಹಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್‌ವೊಂದನ್ನು ನೀಡಿದ್ದು, ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗವೇ ಶೀಘ್ರದಲ್ಲೇ ಈ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಯಾರೆಲ್ಲ ಅರ್ಜಿ ಸಲ್ಲಿಕೆ ಮಾಡಿದ್ದಾರೋ, ಯಾರು ಆರ್ಹರೋ ಆ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ಕೂಡಲೇ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ತಿದ್ದುಪಡಿ
ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಸಮಯವನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ಇದೀಗ ಮತ್ತೆ ತಿದ್ದುಪಡಿ ಮಾಡಲು ಸಮಯ ನಿಗದಿಪಡಿಸಿದ್ದು, ಆಯಾ ದಿನಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಕಾರ್ಡ್ ನಿಷ್ಕ್ರಿಯ
ಈಗಾಗಲೇ ಆರು ತಿಂಗಳಿನಿಂದ ಪಡಿತರ ಪಡೆಯದೇ ಇದ್ದ ಗ್ರಾಹಕರ ಬಿಪಿಎಲ್ ಕಾರ್ಡ್ಅನ್ನು ರದ್ದು ಪಡಿಸುವುದಾಗಿ ಆಹಾರ ಇಲಾಖೆ ಮಾಹಿತಿ ನೀಡಿದ್ದು, ಈ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ರದ್ದುಪಡಿಸುವುದಿಲ್ಲ. ಬದಲಾಗಿ ಆರೋಗ್ಯ ಯೋಜನೆಗಳಿಗೆ ಕಾರ್ಡ್ಗಳನ್ನು ಬಳಸಲು ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.
ಹಣ ಜಮೆ
ಈಗಾಗಲೇ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ತಲಾ 10ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇದೀಗ ಡಿಸೆಂಬರ್‌ವರೆಗೆ ಗ್ರಾಹಕರ ಖಾತೆಗೆ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ನೀಡಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
