
ಪೋರ್ಟ್ ಬ್ಲೇರ್: ಭಾರತೀಯ ಕರಾವಳಿ ರಕ್ಷಣಾ ಪಡೆ ಅಂಡಮಾನ್‌ನಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5 ಟನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.
ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಗೆ ಭಾರತ ‘ಸಾಗರ್ ಮಂಥನ್ – 4’ ಎಂಬ ಗುಪ್ತಚರ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ ನೌಕಾಪಡೆಯು ಭಾರತದ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಮತ್ತು ದೋಣಿಗಳ ಮೇಲೆ ನಿಗಾ ಇಡುತ್ತದೆ.
ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ಕರಾವಳಿಯಲ್ಲಿ ಅಧಿಕಾರಿಗಳು ಸುಮಾರು 700 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು.
ಇದುವರೆಗೆ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡ ಮಾದಕ ವಸ್ತುವಿನಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
