Home ಸುದ್ದಿಗಳು ಆಯತಪ್ಪಿ ಮರದಿಂದ ಬಿದ್ದು ಕೃಷಿಕ ಸಾವು

ಆಯತಪ್ಪಿ ಮರದಿಂದ ಬಿದ್ದು ಕೃಷಿಕ ಸಾವು

A 13-year-old boy committed suicide due to mobile obsession

ಹೆಬ್ರಿ: ಪ್ರಗತಿಪರ ಕೃಷಿಕರೊಬ್ಬರು ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕಬ್ಬಿನಾಲೆ ಹೊನ್ನ ಕೊಪ್ಪಲದಲ್ಲಿ ನಡೆದಿದೆ.

ಮೃತರನ್ನು ಜ್ಞಾನೇಶ್ವರ ಹೆಬ್ಟಾರ್‌(62) ಎಂದು ಗುರುತಿಸಲಾಗಿದೆ.

ಜ್ಞಾನೇಶ್ವರ ಹೆಬ್ಟಾರ್‌ ಕೃಷಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಹೊತ್ತು ತನ್ನ ಪತಿ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿರುವುದು ಗೊತ್ತಾಗಿದೆ.

ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್‌ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.

ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 
Previous articleಆಡಳಿತ ಪಕ್ಷ ವಿಪಕ್ಷಗಳ ರಾಜಕೀಯ ಕಿತ್ತಾಟ ಸದನದ ಹೊರಗೆ ನಡೆಸಲಿ: ಯು.ಟಿ. ಖಾದರ್
Next articleಅಕ್ರಮವಾಗಿ ಮದ್ಯ ದಾಸ್ತಾನು, ಸಾಗಾಟ ಪ್ರಕರಣ: ಆರೋಪಿ ಖುಲಾಸೆ