
ಕಟಪಾಡಿ: ಶಂಕರಪುರ ಪೇಟೆಯ ಸಮೀಪದ ಮನೆಯಂಗಳಕ್ಕೆ ನುಗ್ಗಿದ ಚಿರತೆಯೊಂದು ಮನೆಯ ನಾಲ್ಕು ವರ್ಷದ ಪರ್ಶಿಯನ್ ಬೆಕ್ಕನ್ನು ಹೊತ್ತೂಯ್ದ ಘಟನೆ ಡಿ. 11ರ ರಾತ್ರಿ ನಡೆದಿದೆ.
ಡಿ. 12ರಂದು ಬೆಳಗ್ಗೆ ನೋಡಿದಾಗ ಬೆಕ್ಕು ಕಾಣೆಯಾಗಿದ್ದನ್ನು ಗಮನಿಸಿದ ಮನೆಯವರು ಸಾಕಷ್ಟು ಹುಡುಕಾಡಿದ್ದರು. ಕೊನೆಗೆ ಸಿಸಿ ಕೆಮರಾ ಪರಿಶೀಲನೆ ನಡೆಸಿದಾಗ ಚಿರತೆಯ ದಾಳಿ ಬಯಲಿಗೆ ಬಂದಿದೆ.
ಶಂಕರಪುರ ಪೇಟೆಯ ಸಮೀಪದ ಹಿತ್ಲುಹೌಸ್‌ನ ಮಾರ್ಗರೆಟ್ ಜುಡಿತ್ ಡಿ’ಸೋಜಾ ಅವರ ಮನೆಯಲ್ಲಿ ಘಟನೆ ನಡೆದಿದೆ.
ಸಿಸಿ ಕೆಮರಾ ವಿಡಿಯೋ ಪ್ರಕಾರ, ಡಿ. 11ರ ರಾತ್ರಿ 1.25 ಗಂಟೆ ಹೊತ್ತಿಗೆ ಈ ಚಿರತೆ ಜನವಸತಿ ಪ್ರದೇಶಕ್ಕೆ ಬಂದಿದೆ. ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ಅದು ರಾತ್ರಿ 3 ಗಂಟೆಯ ಹೊತ್ತಿಗೆ ಬೆಕ್ಕನ್ನು ಹಿಡಿದು ತಿಂದು ಕಾಲ್ಕಿತ್ತಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.
