Home ಕರ್ನಾಟಕ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್‌ ರೈಲಿಗೆ ಆಕಸ್ಮಿಕ ಬೆಂಕಿ: ಭಾಗಶಃ ಸುಟ್ಟು ಹೋದ ತಿಂಡಿ

ಬಿಜೂರು ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್‌ ರೈಲಿಗೆ ಆಕಸ್ಮಿಕ ಬೆಂಕಿ: ಭಾಗಶಃ ಸುಟ್ಟು ಹೋದ ತಿಂಡಿ

0

ಉಪ್ಪುಂದ: ಬೈಂದೂರು ತಾಲಕಿನ ಬಿಜೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ರೈಲ್ವೆ ನಿಲ್ದಾಣದಲ್ಲಿ ಲಾರಿಗಳನ್ನು ಹೊತ್ತ ಗೂಡ್ಸ್‌ ರೈಲಿಗೆ ಅಕಸ್ಮಿಕವಾಗಿ ಬೆಂಕಿ ತಗುಲಿ ಅದರಲ್ಲಿದ್ದ ತಿಂಡಿ ತಿನಿಸುಗಳು ಸುಟ್ಟು ಹೋಗಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಸೋಮವಾರ ಮುಂಬೈ ಕೋಲಾಡ್‌ನಿಂದ ಮಂಗಳೂರು ಸುರತ್ಕಲ್‌ ಕಡೆಗೆ ತಿಂಡಿ ತಿನಿಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ರೈಲು ಬಿಜೂರು ಸಮೀಪ ಬರುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನಲ್ಲಿದ್ದ ಲಾರಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ರೈಲು ನಿಲ್ಲಿಸಿ ಬೆಂಕಿ ಆರಿಸಲು ಯತ್ನಿಸಿದ್ದಾರೆ.

ಇನ್ನು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೈಂದೂರು ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

LEAVE A REPLY

Please enter your comment!
Please enter your name here