Home ಸುದ್ದಿಗಳು ಕರಾವಳಿಯ ಕಡಲ ತೀರಕ್ಕೆ ಹೆಚ್ಚುವರಿ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆ

ಕರಾವಳಿಯ ಕಡಲ ತೀರಕ್ಕೆ ಹೆಚ್ಚುವರಿ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆ

0
ಕರಾವಳಿಯ ಕಡಲ ತೀರಕ್ಕೆ ಹೆಚ್ಚುವರಿ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜನೆ

ಉಡುಪಿ: ಪ್ರವಾಸದ ಕಾರಣಕ್ಕೆ ಹೊರ ಜಿಲ್ಲೆಗಳಿಂದ ಕರಾವಳಿಯ ಕಡಲತೀರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ.

ಈ ಕಾರಣ ಸುರಕ್ಷತೆಯ ದೃಷ್ಟಿಯಿಂದ ಕಡಲ ತೀರದಲ್ಲಿ ವಿಶೇಷ ಭದ್ರತಾ ಸಿಬ್ಬಂದಿ ನಿಯೋಜಿಸಲು ಜಿಲ್ಲಾಡಳಿತ, ಜಿ.ಪಂ. ಮುಂದಾಗಿದೆ.

ಮಲ್ಪೆ, ಕಾಪು, ಪಡುಬಿದ್ರಿ, ಕೋಡಿ ಕನ್ಯಾನ, ಮರವಂತೆ, ಬೈಂದೂರು, ಸೋಮೇಶ್ವರ ಬೀಚ್‌ಗಳಲ್ಲಿ ಈಗಾಗಲೇ ಟೂರಿಸ್ಟ್‌ ಮಿತ್ರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಾಲಾ ಪ್ರವಾಸ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಹೀಗಾಗಿ 25 ಮಂದಿ ಹೋಂ ಗಾರ್ಡ್‌ಗಳನ್ನು ಹೆಚ್ಚುವರಿಯಾಗಿ ನೇಮಿಸಲಾಗುತ್ತಿದ್ದು, ಅವರಿಗೆ 5 ದಿನಗಳ ತರಬೇತಿ ನೀಡಲಾಗುತ್ತದೆ.

ಶಿಕ್ಷಣ ಇಲಾಖೆ ಸಹಿತ ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆ, ಎಸ್‌ಡಿಎಂಸಿ, ಇತರ ಎನ್‌ಜಿಒ ಸಂಸ್ಥೆಗಳ ಮೂಲಕ ಶಾಲೆ, ಕಾಲೇಜುಗಳಲ್ಲಿ ಇಲ್ಲಿನ ಕಡಲ ತೀರ, ಅದರಲ್ಲಿನ ಅಪಾಯ, ಎಚ್ಚರ ವಹಿಸಬೇಕಾದ ಅಗತ್ಯ ಇತ್ಯಾದಿ ಕುರಿತು ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್‌ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ.

 

LEAVE A REPLY

Please enter your comment!
Please enter your name here