Home ಸುದ್ದಿಗಳು ಅಮುಲ್ ಹಾಲಿನ ಬೆಲೆ ಲೀಟರ್‌ಗೆ 1 ರೂ. ಕಡಿತ ಘೋಷಿಸಿದ GCMMF

ಅಮುಲ್ ಹಾಲಿನ ಬೆಲೆ ಲೀಟರ್‌ಗೆ 1 ರೂ. ಕಡಿತ ಘೋಷಿಸಿದ GCMMF

Amul milk price Rs 1 per litre. GCMMF announced cuts

ನವದೆಹಲಿ: ಅಮುಲ್ 1 ಲೀಟರ್ ಪ್ಯಾಕ್‌ನ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ.

ಕಳೆದ ವರ್ಷ ಜೂನ್‌ನಲ್ಲಿ ಅಮುಲ್ ತನ್ನ ಎಲ್ಲಾ ಮಾದರಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಇದೀಗ ಅಮುಲ್ ಹಾಲಿನ ಪ್ಯಾಕ್​ಗಳ ಬೆಲೆ ಲೀಟರ್​ಗೆ 1 ರೂ. ಕಡಿಮೆ ಮಾಡಿರುವುದಾಗಿ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (GCMMF) ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಘೋಷಿಸಿದ್ದಾರೆ.

ಹಾಲಿನ ಬೆಲೆ ಬದಲಾವಣೆಯ ನಂತರ, 1 ಲೀಟರ್ ಅಮುಲ್ ಗೋಲ್ಡ್ ಹಾಲಿನ ಪೌಚ್‌ನ ಬೆಲೆ 66 ರೂ.ಗಳಿಂದ 65 ರೂ.ಗಳಿಗೆ ಇಳಿಯಲಿದೆ. 1 ಲೀಟರ್ ಅಮುಲ್ ಟೀ ಸ್ಪೆಷಲ್ ಹಾಲಿನ ಪೌಚ್‌ನ ಬೆಲೆ 62 ರೂ.ಗಳಿಂದ 61 ರೂ.ಗಳಿಗೆ ಇಳಿಯಲಿದೆ. ಅದೇ ರೀತಿ, ಅಮುಲ್ ತಾಜಾ ಹಾಲಿನ ದರವನ್ನು ಲೀಟರ್‌ಗೆ 54 ರೂ.ಗಳಿಂದ 53 ರೂ.ಗಳಿಗೆ ಇಳಿಸಲಾಗುವುದು.

ಈ ಮೊದಲು 2024ರ ಜೂನ್ ತಿಂಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿತ್ತು. ಅಮುಲ್ ಹಾಲಿನ ಬೆಲೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಿದ ನಂತರ ಮದರ್ ಡೈರಿ ಕೂಡ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು.

 
Previous articleರಕ್ಷಣಾ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 5ಕ್ಕೂ ಹೆಚ್ಚು ಮಂದಿ ಸಾವು
Next articleಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣ: ಬಂಧಿತರಿಗೆ ಫೆ. 7ರವರೆಗೆ ನ್ಯಾಯಾಂಗ ಬಂಧನ