
ಪಡುಬಿದ್ರಿ: ನವವಿವಾಹಿತೆಯ ಮೇಲೆ ಹಲ್ಲೆ ನಡೆಸಿದ ಮನೆಯವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನವವಿವಾಹಿತೆ ಮೂಳೂರಿನ ಅಫÕತ್ (25) ಮೇಲೆ ಹಲ್ಲೆ ನಡೆಸಲಾಗಿದೆ.
ಆಭರಣಗಳನ್ನು ತರದೆ ತಮ್ಮ ಮಗನನ್ನು ಬುಟ್ಟಿಗೆ ಹಾಕಿಕೊಂಡೆ ಎನ್ನುತ್ತಾ ಬೈದು ಮನೆ ಬಿಟ್ಟು ತೆರಳುವಂತೆ ಹೀನಾಯವಾಗಿ ವರ್ತಿಸಿದ್ದಾರೆ. ಮನೆಯವರಿಗೆ ಪತಿ ಕೂಡ ಸಾಥ್ ನೀಡಿದ್ದಾನೆ. ಮಾವ ಇಬ್ರಾಹಿಂ, ಅತ್ತೆ ನಫೀಸಾ, ಬಾವ ಮಹಮ್ಮದ್ ಶಂಶೀರ್, ಅತ್ತಿಗೆ ಸಾಯಿರಾಬಾನು ವಿರುದ್ಧ ಅಫÕತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನಾ ಗ್ರಾಮದ ಅಹಮ್ಮದ್ ಸಮೀರ್ ಅವರನ್ನು ಪ್ರೇಮಿಸಿ ಎರಡೂ ಮನೆಯವರ ಒಪ್ಪಿಗೆಯೊಂದಿಗೆ ಅ. 13ರಂದು ಕಾರ್ಕಳದಲ್ಲಿ ನಡೆದಿದ್ದ ಮದುವೆಯ ಬಳಿಕ ಇನ್ನಾ ಗ್ರಾಮದ ಕಡೆಕುಂಜದ ಪತಿಯ ಮನೆಯಲ್ಲಿ ಅಫÕತ್ ವಾಸವಿದ್ದರು.
ನ. 10ರಂದು ನಡೆದಿದ್ದ ಹಲ್ಲೆ ಬಳಿಕ ಮೂಳೂರಿನ ತನ್ನ ಮನೆಯನ್ನು ಸೇರಿ ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡಿದ್ದರು.
ಆ ಬಳಿಕ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
