Home ಸುದ್ದಿಗಳು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕಳ್ಳತನಕ್ಕೆ ಯತ್ನ: ಕಳ್ಳರಿಗೆ ಧರ್ಮದೇಟು

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕಳ್ಳತನಕ್ಕೆ ಯತ್ನ: ಕಳ್ಳರಿಗೆ ಧರ್ಮದೇಟು

Kundapur-based boat sinks near Karwar

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಬೋಟ್‌ನಲ್ಲಿ ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಕಳ್ಳರು ಕಳ್ಳತನ ನಡೆಯುವ ವೇಳೆ ಬೋಟ್‌ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾರೆ.

ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗೆ ಮೂವರು ಬಂದು ಬೋಟ್‌ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್‌ನ ಸ್ಟೋರೇಜ್‌ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು.

ಅಲ್ಲಿಂದ ಕಳವು ಮಾಡುವಾಗ ಬೋಟ್‌ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್‌ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್‌ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್‌ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆನ್ನಲಾಗಿದೆ.

 
Previous articleಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ಸೂಚನೆ
Next articleಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ: ಏನಿದರ ವಿಶೇಷತೆ?