ಉತ್ತರಪ್ರದೇಶ: ಆಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮನಿಗೆ ಪ್ರಾಣಪ್ರತಿಷ್ಠೆ ನೆರೆವೇರಿಸಿದ್ದ ಹಿರಿಯ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್(86) ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ವಾರಣಾಸಿಯಲ್ಲಿ ನೆಲೆಸಿದ್ದರು.
ಇದೇ ವರ್ಷ ಜನವರಿ ತಿಂಗಳ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆದಿತ್ತು. ಲಕ್ಷ್ಮಿಕಾಂತ್ ದೀಕ್ಷಿತ್ ಮೂಲತಃ ಮಹಾರಾಷ್ಟ್ರ ಮೂಲದ ಸೋಲಾಪುರ ಜಿಲ್ಲೆಯವರಾಗಿದ್ದಾರೆ.
