ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಪ್ರಚಾರ ಸಭೆ ಇಂದು ಸಿದ್ದಾಪುರದ ರಂಗನಾಥ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ ವೈ ರಾಘವೇಂದ್ರ,ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ,ಕಿಶೋರ್ ಕುಮಾರ್ ಅಧ್ಯಕ್ಷರು, ಬಿಜೆಪಿ ಉಡುಪಿ ಜಿಲ್ಲೆ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷರು, ಬಿಜೆಪಿ ಬೈಂದೂರು ಮಂಡಲ, ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪೃಥ್ವಿರಾಜ್ ಶೆಟ್ಟಿ , ಬಿಜೆಪಿ ಉಡುಪಿ ಜಿಲ್ಲೆ ರಾಜೇಶ್ ಕಾವೇರಿ ಪ್ರಭಾರಿ, ದೀಪಕ್ ಶೆಟ್ಟಿ ಅಭ್ಯರ್ಥಿ ಪ್ರಮುಖ್,ಬೈಂದೂರು ಮಂಡಲದ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯರು ಹಾಗೂ ಮುಖಂಡರು ಭಾಗವಹಿಸಿದ್ದರು.
