ಕಾರ್ಕಳ: ಡಿ. 27,28,29 ರಂದು ಕಾರ್ಕಳ ಟೈಗರ್ಸ್,ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ, ಬಾಯ್ ಝೋನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಕಾರ್ಕಳದಲ್ಲಿ ಅದ್ದೂರಿಯಾಗಿ ಕಾರ್ಲೋತ್ಸವವು ನಡೆಯಲಿದೆ ಎಂದು ಪುರಸಭಾ ಮಾಜಿ ಸದಸ್ಯ ಹಾಗೂ ಟೈಗರ್ಸ್ ಬಳಗದ ಸದಸ್ಯರಾದ ಪ್ರಕಾಶ್ ರಾವ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಲೋತ್ಸವದಲ್ಲಿ ಸುಮಾರು 200ಕ್ಕೂ ಮಿಕ್ಕಿ ವಿವಿಧ ಸ್ಟಾಲ್ ಗಳು, ವಸ್ತುಪ್ರದರ್ಶನ, ಆಹಾರಮೇಳ, ಅಮ್ಯೂಸ್ಮೆಂಟ್ ಪಾರ್ಕ್, ಆನೆಕೆರೆ ಹಾಗೂ ರಾಮ ಸಮುದ್ರದಲ್ಲಿ ಬೋಟಿಂಗ್ ವ್ಯವಸ್ಥೆ ಇದೆ.
ಡಿ. 27 ರಂದು ರಾಜ್ಯಮಟ್ಟದ ನೃತ್ಯಸ್ಪರ್ಧೆ, ಹುಲಿವೇಷ, ವಾಯಲಿನ್, ಚೆಂಡೆ, ಯಕ್ಷಗಾನ ನಡೆಯಲಿದ್ದು, ಡಿ. 28ರಂದು ವಿಶೇಷವಾಗಿ ಆಲ್ ಓಕೆ ಬ್ಯಾಂಡ್ ನಡೆಯಲಿದ್ದು, ಬಾಲಿವುಡ್ ಕೊರಿಯೋಗ್ರಾಫರ್, ನೃತ್ಯಪಟು ಧರ್ಮೇಶ್ ಎಲಾಂಡೆ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಡಿ. 29ರಂದು ಚನಲಚಿತ್ರ ನಟರ ಕೂಡುವಿಕೆಯಲ್ಲಿ ಸ್ಪಾರ್ ನೈಟ್ ನಡೆಯಲಿದ್ದು, ಬಾಯ್ ಝೋನ್‌ನ ನೃತ್ಯ ತಂಡದವರ ಕಾರ್ಯಕ್ರಮ ಪ್ರತೀ ದಿನ ನಡೆಯಲಿದೆ. ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
