
ಮಣಿಪಾಲ: ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಭಾಷಣದಲ್ಲಿ ಹೇಳಿದ್ದ ತುಣುಕು ಇಟ್ಟುಕೊಂಡು ಕೇಸ್ ಹಾಕಲಾಗಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಸಾಧು ಸಂತರು, ಹಿಂದೂಗಳಿಗೆ ರಕ್ಷಣೆ ಇಲ್ಲ. ಸರಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ಕೇಸ್ ದಾಖಲಾಗುತ್ತದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದರು.
ಬಾಂಗ್ಲಾದಲ್ಲಿ ಇಸ್ಕಾನ್ ಮುಖ್ಯಸ್ಥರ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವ ವಿರೋಧಿ ನಡೆ. ಬಾಂಗ್ಲಾ ಇಸ್ಕಾನ್ ಮುಚ್ಚಲು ಹೊರಟಿದೆ. ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.4 ಮತ್ತು 5ರಂದು ಪ್ರತಿಭಟನೆ ನಡೆಸಲಿದ್ದೇವೆ. ಉಡುಪಿಯಲ್ಲಿ ಡಿ. 4ರಂದು ಪ್ರತಿಭಟನೆ ನಡೆಯಲಿದೆ ಎಂದರು.
ಹಿಂದು ಕಾರ್ಯಕರ್ತರ ಮೇಲೆ ಸುಮೊಟೊ ಕೇಸ್ ಹಾಕಲಾಗುತ್ತದೆ. ಸರಕಾರ ತನ್ನ ನಿಲುವಿನಿಂದ ಹೊರಬಂದು ಸಾಧು ಸಂತರಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿದರು.
