
ಇಸ್ಲಾಮಾಬಾದ್: ಪ್ರತ್ಯೇಕತಾವಾದಿ ದಂಗೆಕೋರರೊಂದಿಗೆ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ 18 ಸೈನಿಕರು ಸಾವಿಗೀಡಾಗಿದ್ದಾರೆ. ಇದೇ ವೇಳೆ, 23 ಬಂಡುಕೋರರು ಹತರಾಗಿದ್ದಾರೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಕಲಾತ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ದಂಗೆಕೋರರ ವಿರುದ್ಧದ ಗುಂಡಿನ ದಾಳಿಯಲ್ಲಿ ಸೈನಿಕರು ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.
ಶನಿವಾರ ರಾತ್ರಿಯಿಡೀ ನಡೆದ ಹೋರಾಟದ ನಂತರ ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.
ಬಂಡುಕೋರರ ದಾಳಿಗಳನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಲೂಚಿಸ್ತಾನದ ಪ್ರಾಂತೀಯ ನಾಯಕರು ಖಂಡಿಸಿದ್ದಾರೆ.
