Home ಸುದ್ದಿಗಳು ನ. 23, 24 ರಂದು ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಬೀಚ್ ಉತ್ಸವ

ನ. 23, 24 ರಂದು ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಬೀಚ್ ಉತ್ಸವ

0
ನ. 23, 24 ರಂದು ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಬೀಚ್ ಉತ್ಸವ

ಪಡುಬಿದ್ರಿ : ಜೆಸಿಐ ಪಡುಬಿದ್ರಿ ಇದರ 50 ನೇ ವರ್ಷ ಆಚರಣೆಯ ಸಂಭ್ರಮಾಚರಣೆ ಪ್ರಯುಕ್ತ ನವೆಂಬರ್‌ 23 ಮತ್ತು 24 ರಂದು ಎರಡು ದಿನದ ಬೀಚ್ ಉತ್ಸವ ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಕಾರ್ಯಕ್ರಮ ನಡೆಯಲಿದೆ.

ಕಾಪು ಪ್ರೆಸ್ ಕ್ಲಬ್ ನಲ್ಲಿ ಜೆಸಿಐ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥ ವೈ ಸುಕುಮಾರ್ ಮಾಹಿತಿ ನೀಡಿದರು.

ಜೆಸಿಐ ಪಡುಬಿದ್ರಿ ಆಯೋಜನೆಯಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೀಚ್ ಕ್ರೀಡೆಗಳು ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಜರಗಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಫುಡ್ ಫೆಸ್ಟ್ ಮುಖ್ಯ ಬೀಚ್ ಬಳಿ ನಡೆಯಲಿವೆ ಎಂದು ತಿಳಿಸಿದರು.

ಕೋಸ್ಟಲ್ ಕಾರ್ನಿವಾಲ್ 2024 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜೂನಿಯರ್ ಹಾಗು ಸೀನಿಯ‌ರ್ ಓಪನ್ ವಾಟರ್ ಸೀ ಸ್ವಿಮ್ಮಿಂಗ್ ಸ್ಪರ್ಧಾ ಕೂಟ, ಸಾರ್ವಜನಿಕರಿಗೆ ಮುಕ್ತ ಹಾಗೂ ವಿಶೇಷ ಬೆರ್ ಫೂಟ್ ರನ್, ಆಹಾರ ಮೇಳ, ಉದ್ಯಮ ಮೇಳಗಳು ಇರಲಿವೆ.

ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ, ಪ್ರಸಿದ್ದ ಕಲಾವಿದರಿಂದ ಮ್ಯೂಸಿಕಲ್ ನೈಟ್, ಸ್ಯಾಂಡ್ ಹಾಗೂ ಕ್ರಾಫ್ಟ್ ಆರ್ಟ್ ಸ್ಪರ್ಧೆ ಹಾಗೂ ಪ್ರದರ್ಶನ, ವಿವಿಧ ಮನೋರಂಜನಾ ಹಾಗೂ ಬೀಚ್ ಕ್ರೀಡೆಗಳು, ಬೀಚ್ ಕ್ಯಾಂಪಿಂಗ್ ಇರಲಿವೆ. ವಿವಿಧ ಕ್ಷೇತ್ರಗಳ ಸಾಧಕರು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಪಡುಬಿದ್ರಿ ಪೂರ್ವಾಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ವೇಣುಗೋಪಾಲ್ ಎಸ್ ಜೆ, ಸುರೇಶ್ ಪಡುಬಿದ್ರಿ, ಯಶೋದ ಪಡುಬಿದ್ರಿ, ಸಮಿತ್ ಎರ್ಮಾಳು, ಮಕರಂದ, ಮನು ಉದಯ ಶೆಟ್ಟಿ, ಶ್ರೀನಿವಾಸ ಶರ್ಮ, ಅಶ್ವಥ್, ಪ್ರಸನ್ನ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here