ನವದೆಹಲಿ: ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ತಮ್ಮ ಪತ್ನಿ ಆಯೇಷಾ ಮುಖಜಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ದೆಹಲಿಯ ಪಟಿಯಾಲ ಕೌಟುಂಬಿಕ ನ್ಯಾಯಾಲಯ ಬುಧವಾರ ವಿಚ್ಛೇದನವನ್ನು ಮಂಜೂರು ಮಾಡಿದೆ.
ವಿಚ್ಛೇದನ ಅಜಿಯಲ್ಲಿ ಪತ್ನಿ ವಿರುದ್ಧ ಶೀಖರ್ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಪರಿಗಣಿಸಿರುವ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್, ಶಿಖರ್ ಧವನ್ ತಮ್ಮ ಪತ್ನಿಯಿಂದ ಮಾನಸಿಕ ಹಿಂಸೆಗೆ ಗುರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆ ವಿಚ್ಛೇದನಕ್ಕೆ ಅನುಮೋದನೆ ನೀಡಲಾಗಿದೆ.
2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶಿಖರ್ ಧವನ್ ಮತ್ತು ಆಯೇಷಾ ದಂಪತಿಗೆ ಓವ ಪುತ್ರನಿದ್ದಾನೆ. ತನಗಿರುವ ಒಬ್ಬನೇ ಮಗನಿಂದ ವಷಗಟ್ಟಲೆ ಬೇರೆಯಾಗಿ ಬದುಕುವಂತೆ ಒತ್ತಾಯಿಸಿ ಮಾನಸಿಕವಾಗಿ ಒತ್ತಡ ಹಾಕುತ್ತಿದ್ದಳು ಎಂದು ಆರೋಪಿಸಿ, ಶಿಖರ್ ಧವನ್ ವಿಚ್ಛೇದನ ಅಜಿಯನ್ನು ಸಲ್ಲಿಸಿದ್ದರು. ಇದೀಗ ಈ ಬಗ್ಗೆ ವಿಚಾರಣೆಯನ್ನು ನಡೆಸಿದ ದೆಹಲಿಯ ಪಟಿಯಾಲ ಕೌಟುಂಬಿಕ ನ್ಯಾಯಾಲಯ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ.
