Home ಸುದ್ದಿಗಳು ನನ್ನ ಅನುಮತಿ ಪಡೆಯದೆ ಡಿವೋರ್ಸ್ ಘೋಷಿಸಿದ್ದಾರೆ: ಆರತಿ

ನನ್ನ ಅನುಮತಿ ಪಡೆಯದೆ ಡಿವೋರ್ಸ್ ಘೋಷಿಸಿದ್ದಾರೆ: ಆರತಿ

0
ನನ್ನ ಅನುಮತಿ ಪಡೆಯದೆ ಡಿವೋರ್ಸ್ ಘೋಷಿಸಿದ್ದಾರೆ: ಆರತಿ

ತಮಿಳಿನ ಸ್ಟಾರ್ ನಟ ಜಯಂ ರವಿ  ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಿರುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಅವರ ಪತ್ನಿ ಆರತಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಗಮನಕ್ಕೆ ತರದೇ ಡಿವೋರ್ಸ್  ಘೋಷಿಸಿದ್ದಾರೆ. ಏಕಪಕ್ಷೀಯ ನಿರ್ಧಾರ, ಇದರ ಬಗ್ಗೆ ನನಗೇನು ಹೇಳಿಲ್ಲ ಎಂದು ಆರತಿ ಆರೋಪಿಸಿದ್ದಾರೆ.

ಡಿವೋರ್ಸ್ ಕುರಿತು ಸುದೀರ್ಘವಾಗಿ ಆರತಿ ಪತ್ರ ಬರೆದಿದ್ದಾರೆ. ಅದರಲ್ಲಿ, ಇತ್ತೀಚೆಗೆ ನಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಘೋಷಣೆಯಿಂದ ನನಗೆ ಶಾಕ್ ಆಗಿದೆ. ಯಾಕೆಂದರೆ ನನಗೆ ಗಮನಕ್ಕೆ ತರದೆ, ನನ್ನ ಅನುಮತಿಯನ್ನು ಪಡೆಯದೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

18 ವರ್ಷಗಳ ಕಾಲ ದಾಂಪತ್ಯದ ಇತಿಹಾಸವಿರುವ ವಿಷಯವನ್ನು ಗೌರವಯುತವಾಗಿ, ಖಾಸಗಿಯಾಗಿ ಹ್ಯಾಂಡಲ್ ಮಾಡಬಹುದಿತ್ತು.ಕಳೆದ ಕೆಲವು ದಿನಗಳಿಂದ ನನ್ನ ಪತಿಯೊಡನೆ ಮಾತನಾಡುವುದಕ್ಕೆ ಪ್ರಯತ್ನಪಡುತ್ತಲೇ ಇದ್ದೇನೆ. ನಾವು ನಮ್ಮ ಕುಟುಂಬಕ್ಕಾಗಿ ಮಾಡಿಕೊಂಡಿರುವ ಕಮಿಟ್‌ಮೆಂಟ್‌ಗಳ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಪ್ರಯತ್ನಿಸಿದೆ. ಆದರೆ, ಆ ಅವಕಾಶವನ್ನು ಅವರು ನನಗೆ ಕೊಡಲೇ ಇಲ್ಲ ಎಂದಿದ್ದಾರೆ.

ನನ್ನ ಹಾಗೂ ನನ್ನ ಮಕ್ಕಳನ್ನು ಕತ್ತಲೆಯಲ್ಲಿಟ್ಟು ಈ ಘೋಷಣೆಯನ್ನು ಮಾಡಲಾಗಿದೆ. ಒಬ್ಬ ತಾಯಿಯಾಗಿ ತನ್ನ ಇಬ್ಬರು ಮಕ್ಕಳು ಮೊದಲ ಆದ್ಯತೆಯಾಗಿದ್ದು, ಅವರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲದೆ ತನ್ನ ಮೇಲೆ ಸಾರ್ವಜನಿಕವಾಗಿ ತಪ್ಪನ್ನು ಹೊರಿಸಲಾಗುತ್ತಿದೆ.

ಈ ದಾಂಪತ್ಯದಿಂದ ಹೊರಬರುವುದು ಸಂಪೂರ್ಣ ಏಕಪಕ್ಷೀಯ ನಿರ್ಧಾರವಾಗಿದ್ದು, ಇದು ನಮ್ಮ ಕುಟುಂಬಕ್ಕೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ ಎಂದು ಜಯಂ ರವಿ ವಿರುದ್ಧ ಆರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here