Home ಸುದ್ದಿಗಳು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟರಾಕ್ಷಸ ಡಾಲಿ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟರಾಕ್ಷಸ ಡಾಲಿ

0
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟರಾಕ್ಷಸ ಡಾಲಿ

ಮಂಗಳೂರು: ಸ್ನೇಹಿತರ ಜೊತೆ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನಡದ ನಟ ಡಾಲಿ ಧನಂಜಯ್ ಭೇಟಿ ನೀಡಿದ್ದಾರೆ.

‘ಸಲಾರ್’ ನಟ ನವೀನ್ ಶಂಕರ್ ಜೊತೆ ಡಾಲಿ ಧನಂಜಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ.

ಈ ವೇಳೆ, ಡಾಲಿ ಮತ್ತು ನವೀನ್ ಶಂಕರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ ಸಿನಿಮಾ ಕೆಲಸಕ್ಕೆ ಬ್ರೇಕ್‌ ಸಿಕ್ಕ ಬೆನ್ನಲ್ಲೇ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

 

LEAVE A REPLY

Please enter your comment!
Please enter your name here