
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಬೆಳೆ ಹಾನಿಯಾಗುವುದರ ಜೊತೆಗೆ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತರಕಾರಿ ಬೆಲೆ ಹೆಚ್ಚಾಗಿದೆ.
ಬೆಳ್ಳುಳ್ಳಿ ಕೆ.ಜಿಗೆ 600 ರೂ. ಗಡಿ ದಾಟಿದ್ದು, ಒಂದು ಪೀಸ್ ನುಗ್ಗೆಕಾಯಿ 60ರೂ. ಆಗಿದ್ದು ನುಗ್ಗೆಕಾಯಿ ಕೆ.ಜಿಗೆ 500ರೂ ತಲುಪಿದೆ. ಈರುಳ್ಳಿ ಸೆಂಚುರಿಯಾದರೆ, ಟೊಮೆಟೋ ಅರ್ಧ ಸೆಂಚುರಿ ಬಾರಿಸಿದೆ. ಒಟ್ಟಾರೆ ತರಕಾರಿ ದರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.
ಉಳಿದಂತೆ ಬಟಾಣಿ- ಕೆ.ಜಿಗೆ 180-200 ರೂ.,ಮೆಣಸಿನಕಾಯಿ – ಕೆ.ಜಿಗೆ 40-50 ರೂ., ಆಲೂಗಡ್ಡೆ- ಕೆ.ಜಿಗೆ 35-40 ರೂ.,ಬೀನ್ಸ್- ಕೆ.ಜಿಗೆ 60 ರೂ ಹೆಚ್ಚಾಗಿದೆ.
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಗಳಲ್ಲಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ.
