
ಕೋಲ್ಕತ್ತಾ: ಹಠಾತ್ ಹೃದಯಾಘಾತದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಅವರ ಪತಿ ಚಾಕೋ ಉತ್ತುಪ್(78) ನಿಧನರಾಗಿದ್ದಾರೆ.
ಮನೆಯಲ್ಲಿ ಕುಳಿತು ಟಿವಿ ನೋಡುತ್ತಿರುವಾಗ ಏಕಾಏಕಿ ಕುಸಿದು ಬಿದ್ದ ಚಾಕೋ ಉತ್ತುಪ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಉಷಾ ಉತ್ತುಪ್ ಅವರ ಎರಡನೇ ಪತಿಯಾಗಿದ್ದ ಚಾಕೋ ಉತ್ತುಪ್ ಟೀ ಪ್ಲಾಂಟೇಶನ್ ನೋಡಿಕೊಳ್ಳುತ್ತಿದ್ದರು. ದಂಪತಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಇದ್ದು, ಮೃತರು ಇಬ್ಬರು ಮಕ್ಕಳು ಹಾಗೂ ಮಡದಿಯನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.
