
ಮೂಲ್ಕಿ: ಫೆಬ್ರವರಿ 1 ಮತ್ತು 2ರಂದು ಐಕಳ ಬಾವಕಾಂತಾಬಾರೆ ಬೂದಾಬಾರೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಕಳ ಕಂಬಳ ಶಿಸ್ತುಬದ್ಧವಾಗಿ ನಡೆಯಲಿದೆ. ಕೋಣಗಳನ್ನು ಓಡಿಸುವವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯ ಕೋಣಗಳನ್ನು ಬಿಡಿಸುವಲ್ಲಿ ವಿಳಂಬವಾದರೆ ಕಾಯಲು ಸಧ್ಯವಿಲ್ಲ. ಸಮಯಕ್ಕೆ ಬಾರದ ಕೋಣಗಳ ಯಜಮಾನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಸಮಯ ಪಾಲನೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದರ ಜೊತೆಗೆ ಸರಕಾರ ಕೊಟ್ಟ ಸೂಚನೆಯಂತೆ ನಡೆಸಲಾಗುವುದು ಎಂದರು.
49 ನೇ ವರ್ಷದ ಈ ಕಂಬಳಕ್ಕೆ ಇನ್ನಷ್ಟು ಮೆರುಗು ಸಿಗಬೇಕು. ಇದು ನಮ್ಮ ರೈತಾಪಿ ವರ್ಗದ ಕ್ರೀಡೆಯಾಗಿದ್ದು, ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಪ್ರಶಂಸೆ ದೊರೆತಿದ್ದು, ಲಕ್ಷಾಂತರ ಜನ ಮಾಧ್ಯಮದ ಮೂಲಕ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.
ಮುಂದಿನ ವರ್ಷ ಸುವರ್ಣ ಮಹೋತ್ಸವ ಇರುವುದರಿಂದ ₹55 ಲಕ್ಷ ವೆಚ್ಚದ ವೇದಿಕೆಯನ್ನು ಸಾರ್ವಜನಿಕರ ಉಪಕಾರಕ್ಕಾಗಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದರ ಜೊತೆಗೆ ಐಕಳ ಬಾವದ ದೈವಸ್ಥಾನ ಹಾಗೂ ನಾಗ ಸ್ಥಾನ ಮತ್ತು ಕಾಂತಾಬಾರೆ ಬೂದಾಬಾರೆ ದೈವಸ್ಥಾನವನ್ನು ಜೀರ್ಣೋದ್ದಾರವನ್ನು ೫೦ನೇ ವರ್ಷದ ಕಾರ್ಯಕ್ರಮದಲ್ಲಿ ಮಾಡಲಿದ್ದೇವೆ ಎಂದರು.
ಈ ಕಂಬಳ ಕಾರ್ಯಕರ್ಮದಲ್ಲಿ ‘ಚಂದ್ರಶೇಖರ ಸ್ವಾಮೀಜಿ ಕಂಬಳ ಉದ್ಘಾಟಿಸಲಿದ್ದು, ಮಹಾರಾಷ್ಟ್ರದ ಸರ್ಕಾರದ ಸಾರಿಗೆ ಸಚಿವರಾದ ಪ್ರತಾಪ್ ಜಿ ಬಾಬುರಾವ್ ನಾಯಕ್,ಕರ್ನಾಟಕ ಸರ್ಕಾರದ ಸಭಾಧ್ಯಕ್ಷರಾದ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡು ರಾವ್, ಬೇಲೂರು ಕ್ಷೇತ್ರದ ಶಾಸಕರಾದ ಗೋಪಾಲ್ ಕೃಷ್ಣ, ಶಾಸಕ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಕೋಟ್ಯಾನ್, ಕ್ರಿಕೆಟಿಗ ರವಿ ಶಾಸ್ತ್ರಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ತುಳು ಮತ್ತು ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸುವರು.
ಜೊತೆಗೆ ‘ಸಹಕಾರ ರತ್ನ’ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರಿ ವೀರ ಪ್ರಶಸ್ತಿ’ ನೀಡುವುದರ ಜೊತೆಗೆ ಇತರ 15 ಮಂದಿ ಸಾಧಕರಿಗೆ ಸನ್ಮಾನ ನಡೆಯಲಿದೆ.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿದರು. ವಿಜಯಕುಮಾರ್ ಕಂಗಿನಮನೆ ಮುರುಳಿಧರ ಶೆಟ್ಟಿ ಪ್ರಕಾಶ್ ಶೆಟ್ಟಿ ಪಡುಹಿತ್ತು, ಸಾಯಿನಾಥ ಶೆಟ್ಟಿ, ಸ್ವರಾಜ್ ಶೆಟ್ಟಿ, ಲೀಲಾಧರ ಶೆಟ್ಟಿ, ಚಿತ್ತರಂಜನ್ ಭಂಡಾರಿ, ತಾರಾನಾಥ ಶೆಟ್ಟಿ, ಸಂಜೀವ ಶೆಟ್ಟಿ, ಹರೀಶ್ ಶೆಟ್ಟಿ, ಯೋಗೀಶ್ ರಾವ್, ನವೀನ್ ಚಂದ್ರ ಆಳ್ವ, ದಿವಾಕರ ಚೌಟ, ಇಲ್ಯಾಸ್ ಫ್ರಾಂಕ್ಲಿನ್ ಮತ್ತಿತರರು ಇದ್ದರು.
