Home ಸುದ್ದಿಗಳು ದಸರಾ ಆನೆಗಳ ನಡುವೆ ಗುದ್ದಾಟ: ಕಂಜನ್ ಆನೆಯ ಮೇಲೆ ದಾಳಿ ಮಾಡಿದ ಧನಂಜಯ

ದಸರಾ ಆನೆಗಳ ನಡುವೆ ಗುದ್ದಾಟ: ಕಂಜನ್ ಆನೆಯ ಮೇಲೆ ದಾಳಿ ಮಾಡಿದ ಧನಂಜಯ

0
ದಸರಾ ಆನೆಗಳ ನಡುವೆ ಗುದ್ದಾಟ: ಕಂಜನ್ ಆನೆಯ ಮೇಲೆ ದಾಳಿ ಮಾಡಿದ ಧನಂಜಯ

ಮೈಸೂರು: ದಸರಾ ಗಜಪಡೆಯ ಆನೆ ಧನಂಜಯ ತನ್ನ ಜೊತೆ ಇರುವ ಮತ್ತೊಂದು ಆನೆ ಕಂಜನ್ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.

ಆನೆ ಧನಂಜಯನ ದಾಳಿಗೆ ತತ್ತರಿಸಿದ ಕಂಜನ್‌ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ.

ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ

ಮಹೇಂದ್ರ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದ್ದನು ವಿಡಿಯೋದಲ್ಲಿ ಕಾಣಬಹುದು.

 

LEAVE A REPLY

Please enter your comment!
Please enter your name here