ಬೆಂಳೂರು: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ದೀಪಾವಳಿ ಅಂದ್ರೆ ಸಾಕು ತಕ್ಷಣಕ್ಕೆ ನೆನಪಿಗಗೆ ಬರುವುದು ಪಟಾಕಿ. ಬೆಳಕಿನ ಹಬ್ಬವಾದ ಈ ದೀಪಾವಳಿ ಅದೆಷ್ಟೋ ಬಾರಿ ಕೆಲವರ ಬಾಳಲ್ಲಿ ಕತ್ತಲನ್ನು ತಂದುಬಿಡುತ್ತದೆ. ಸರ್ಕಾರ ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಜನರು ಮಾತ್ರ ದುಡುಕುತ್ತಲೇ ಇರುತ್ತಾರೆ. ಈಗಾಗಲೇ ಪಟಾಕಿ ದುರಂತ ಸಂಭಿವಿಸಿ ಅನೇಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದೀಗ ಇಂತಹ ಅವಾಂತರಗಳನ್ನು ತಡೆಯಲು ಸರ್ಕಾರ ಮುಂದಾಗಿದ್ದು, ಅಧಿಕೃತ ಪರ್ಮನೆಂಟ್ ಲೈಸನ್ಸ್ ಹೊಂದಿರುವವರಿಗೆ ಮಾತ್ರ ಈ ಬಾರಿ ಪಟಾಕಿಯನ್ನು ಮಾರಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಅದರಲ್ಲೂ ಗ್ರಿನ್ ಪಟಾಕಿಯನ್ನು ಮಾತ್ರ ಮಾರಲು ಅನುಮತಿ ನೀಡಲಾಗಿದೆ. ಪಟಾಕಿ ಮಳಿಗೆಗಳನ್ನು ಪರಿಶೀಲಿಸಿ, ಗ್ರೀನ್ ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಇದ್ದರೆ ಅಂತಹುವುಗಳನ್ನು ಮುಟ್ಟುಗೋಲು ಹಾಕಿ ಕ್ರಿಮಿನಲ್ ಪ್ರಕರಣ ದಾಖಲಿಸುವುಂತೆ ಸರ್ಕಾರ ಸೂಚಿಸಿದೆ. ಜೊತೆಗೆ ರಾತ್ರಿ 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಅಲ್ಲದೇ ಮಕ್ಕಳು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಪಟಾಕಿ ಹೊಡೆಯುವಂತೆ ಸೂಚಿಸಲಾಗಿದೆ.
