Home ಸುದ್ದಿಗಳು ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಮಾಜಿ ಸ್ಪರ್ಧಿ ಜಗದೀಶ್ ಬಂಧನ

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಮಾಜಿ ಸ್ಪರ್ಧಿ ಜಗದೀಶ್ ಬಂಧನ

Former Bigg Boss Kannada season 11 contestant Jagadish arrested

ಬೆಂಗಳೂರು: ವಕೀಲ ಹಾಗೂ ಬಿಗ್​ ಬಾಸ್​ ಕನ್ನಡ  ಸೀಸನ್​ 11ರ ಮಾಜಿ ಸ್ಪರ್ಧಿ ಜಗದೀಶ್  ಮತ್ತು ಅವರ ಗನ್​ ಮ್ಯಾನ್​ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ನಡೆದ ಗಲಾಟೆಯಲ್ಲಿ ಅವರ ಗನ್​ಮ್ಯಾನ್​ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್​ ಜಗದೀಶ್​ರನ್ನು ಬಂಧಿಸಿದ್ದಾರೆ.

ಏನಿದು ಘಟನೆ: ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೋರಿಸಿದ್ದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಘಟನೆ ಸಂಬಂಧ ಪ್ರತಿಕ್ರಿಯಿಸುವಾಗ ಅವರು ಆವಾಜ್ ಹಾಕಿದ್ದರು. ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದಿದ್ದರು.

ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಮಾಡಿ ಕೋಲು ದೊಣ್ಣೆ ತೆಗೆದುಕೊಂಡು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಜೊತೆಗೆ ಜಗದೀಶ್​ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವೇಳೆ ಜಗದೀಶ್​ ಅವರ ಗನ್​ ಮ್ಯಾನ್​ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

 
Previous articleಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣ: ಬಂಧಿತರಿಗೆ ಫೆ. 7ರವರೆಗೆ ನ್ಯಾಯಾಂಗ ಬಂಧನ
Next articleಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಿನಲ್ಲಿ ಕಿರುಕುಳ: ನಾಲ್ವರ ಬಂಧನ