ಇಂದು ಮೊಬೈಲ್ ಅನ್ನೋದು ಬಹು ಮುಖ್ಯವಾದ ಸಾಧನ ವಾಗಿದ್ದು ನಮಗೆ ಬೇಕಾದ ಮಾಹಿತಿಗಳನ್ನು ಮೊಬೈಲ್ ಮೂಲಕವೇ ಪಡೆಯುತ್ತೇವೆ. ಅದರಲ್ಲೂ ಡಿಜಿಟಲಿಕರಣಕ್ಕೆ ಒತ್ತು ನೀಡಿದ ನಂತರದಲ್ಲಿ ಮೊಬೈಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.ಇಂದೂ ಮಾರುಕಟ್ಟೆಗೂ ನನಾ ರೀತಿಯ ಮೊಬೈಲ್ ಗಳು ಬಂದಿದ್ದು ಅದಕ್ಕೆ ಅನುಗುಣವಾದ ಸಿಮ್ ಕೂಡ ಅಗತ್ಯವಾಗಿಬೇಕು.ಇಂದು ಫೈವ್ ಜಿ ಯುಗ ಆರಂಭವಾದ ನಂತರ ಸಿಮ್ ಖರೀದಿಗೂ ಬೇಡಿಕೆ ಹೆಚ್ಚಾಗಿದೆ.
ಸೈಬರ್ ಅಪರಾಧ ಹೆಚ್ಚಳ
ಇಂದು ಸೈಬರ್ ಅಪರಾಧಗಳು ಹೆಚ್ಚಾಗಿದ್ದು, ದೇಶವಿರೋಧಿ ಕೃತ್ಯಗಳನ್ನು, ಮೋಸಗೊಳಿಸುವ ವಂಚನೆಗಳು ಹೆಚ್ಚಾಗಿದ್ದು, ವಿವಿಧ ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಟ್ಟು ನಿಟ್ಟಿನ ಕ್ರಮವನ್ನು ಜಾರಿಗೆ ತಂದಿದೆ.
ದಂಡ ನೀಡಲಾಗುತ್ತದೆ
ನಕಲಿ ಸಿಮ್ ಕಾರ್ಡ್ಗಳಿಂದ ಉಂಟಾಗುವ ವಂಚನೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ಹೊಸ ನಿಯಮ ವನ್ನು ಜಾರಿಗೆ ತಂದಿದೆ.ಇನ್ಮುಂದೆ ನೋಂದಾಯಿಸದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಿದರೆ ಟೆಲಿಕಾಂ ಆಪರೇಟರ್ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ನಿಯಮ ಏನು?
SIM ಕಾರ್ಡ್ ಖರೀದಿಸುವ ವ್ಯಕ್ತಿ KYC ಅನ್ನು ಮಾಡಬೇಕಾಗಿರುವುದು ಕಡ್ಡಾಯವಾಗಿದ್ದು ಸಿಮ್ ಕಾರ್ಡ್ ಖರೀದಿದಾರರು ಮತ್ತು ಮಾರಾಟಗಾರರು ಏಕಕಾಲದಲ್ಲಿ ಅನೇಕ ಸಿಮ್ಗಳನ್ನು ಖರೀದಿಸುವುದನ್ನು ಸರ್ಕಾರ ನಿರ್ಬಂಧಮಾಡಿದೆ.ಗ್ರಾಹಕರು ತಮ್ಮ ಸಂಖ್ಯೆಗಳಿಗೆ ಸಿಮ್ ಕಾರ್ಡ್ಗಳನ್ನು ಖರೀದಿಸಲು, ಆಧಾರ್ ಸ್ಕ್ಯಾನಿಂಗ್ ಮತ್ತು ಜನಸಂಖ್ಯಾ ಡೇಟಾ ಸಂಗ್ರಹಣೆ ಕಡ್ಡಾಯವಾಗಿ ನೀಡಬೇಕಿದೆ.
ಇನ್ನೂ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಲು ಬಯಸುವ ಮತ್ತು ಸಿಮ್ ಕಾರ್ಡ್ ಡೀಲರ್ ಆಗಿರುವ ಯಾರಾದರೂ ಪರಿಶೀಲನೆ ಮಾಡಬೇಕಾಗುತ್ತದೆ. ಮಾರಾಟ ಮಾಡುವಾಗ ಸಿಮ್ ಕಾರ್ಡ್ಗಳನ್ನು ನೋಂದಾವಣೆ ಮಾಡುವುದು ಸಹ ಮುಖ್ಯ ವಾಗುತ್ತದೆ.
ಅಷ್ಟೆ ಅಲ್ಲದೆ ಸಿಮ್ ಕಾರ್ಡ್ಗಳನ್ನು ಇನ್ನು ಮುಂದೆ ಹೆಚ್ಚು ಸಂಖ್ಯೆ ಯಲ್ಲಿ ನೀಡಲಾಗುವುದಿಲ್ಲ ಮತ್ತು ಸಿಮ್ ಕಾರ್ಡ್ ಅನ್ನು ಮುಚ್ಚಿದ ನಂತರ ಆ ಸಂಖ್ಯೆಯು 90 ದಿನಗಳ ಅವಧಿಯ ನಂತರ ಮಾತ್ರ ಇನ್ನೊಬ್ಬ ವ್ಯಕ್ತಿಗೆ ಇದನ್ನು ನೀಡಲು ಅನುಮತಿ ನೀಡುತ್ತದೆ.
ಸಿ ಮ್ ಕಾರ್ಡ್ ಡೀಲರ್ಗಳ ಪರಿಶೀಲನೆಯನ್ನು ಕೂಡ ಮಾಡಲಿದ್ದು, ಟೆಲಿಕಾಂ ಆಪರೇಟರ್ ಮೂಲಕ ಪರಿಶೀಲನೆ ಕೂಡ ಮಾಡಲಾಗುತ್ತದೆ. ಸಿಮ್ ಮಾರಾಟಗಾರರು ನೋಂದಣಿ ಮಾನದಂಡವನ್ನು ಅನುಸರಿಸಲು 12 ತಿಂಗಳ ಅವಧಿಯನ್ನು ಹೊಂದಿರುತ್ತಾರೆ.
