Home ಸುದ್ದಿಗಳು ರಾಜ್ಯ ವಾಹನ ಸವಾರರಿಗೆ ಗುಡ್ ನ್ಯೂಸ್: ನಂಬರ್ ಪ್ಲೇಟ್ ಅಳವಡಿಕೆಯ ಡೆಡ್‌ಲೈನ್‌ ಮತ್ತೊಮ್ಮೆ ವಿಸ್ತರಣೆ

ವಾಹನ ಸವಾರರಿಗೆ ಗುಡ್ ನ್ಯೂಸ್: ನಂಬರ್ ಪ್ಲೇಟ್ ಅಳವಡಿಕೆಯ ಡೆಡ್‌ಲೈನ್‌ ಮತ್ತೊಮ್ಮೆ ವಿಸ್ತರಣೆ

0
ವಾಹನ ಸವಾರರಿಗೆ ಗುಡ್ ನ್ಯೂಸ್: ನಂಬರ್ ಪ್ಲೇಟ್ ಅಳವಡಿಕೆಯ ಡೆಡ್‌ಲೈನ್‌ ಮತ್ತೊಮ್ಮೆ ವಿಸ್ತರಣೆ

ಇದೀಗ ಕರ್ನಾಟಕ ಸಾರಿಗೆ ಇಲಾಖೆಯು ವಾಹನ ಮಾಲೀಕನಿಗೆ ಸಿಹಿ ಸುದ್ದಿ ನೀಡಿದ್ದು, ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಅವಧಿಯನ್ನು‌ ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಹೌದು, ಏಪ್ರಿಲ್‌ 1, 2019ಕ್ಕೂ ಮುಂಚೆ ನೋಂದಣಿಯಾದ ವಾಹನಗಳು ಕಡ್ಡಾಯವಾಗಿ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಹಲವಾರು ಭಾರಿ‌ ಮಾಹಿತಿ ನೀಡಿದೆ.

ಆದರೆ ಸುಮಾರು‌ 20 ಲಕ್ಷ ವಾಹನ‌ ನೋಂದಣಿಯಾಗಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು ಹೆಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಳ್ಳಲು ಬಾಕಿ ಇದೆ. ಇದೀಗ ನಂಬರ್‌ ಪ್ಲೇಟ್‌ ಅಳವಡಿಕೆಯ ಸಮಯವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ್ದು, ಸೆಪ್ಟೆಂಬರ್ 15, 2024 ರವರೆಗೆ ಅವಕಾಶ ನೀಡಿದೆ.‌ ಹೌದು, ಇದರ ‌ ಡೆಡ್‌ಲೈನ್ ಬಳಿಕವೂ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದೇ ಇದ್ದಲ್ಲಿ ಈ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಹೆಚ್‌ಎಸ್‌ಆರ್‌ಪಿ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಸೆಪ್ಟೆಂಬರ್ 15ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಡೆಡ್​ಲೈನ್ ನೀಡಲಾಗುತ್ತದೆ ಎನ್ನುವ ಸ್ಪಷ್ಟನೆಯನ್ನು‌ ನೀಡಿದ್ದಾರೆ. ‌ ಸೆಪ್ಟೆಂಬರ್ 15ರ ಬಳಿಕ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ. ಈಗಾಗಲೇ ಹಲವು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಮಾಡಿದ್ದೇವೆ ಎನ್ನುವ ಸ್ಪಷ್ಟನೆಯನ್ನು‌ ನೀಡಿದ್ದಾರೆ.

ಹಾಗಾಗಿ ಈ ಸಮಯದ ನಂತರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸದಿದ್ದರೇ ದಂಡ ವಿಧಿಸುವುದು ಅನಿವಾರ್ಯವಾಗಿದೆ.‌ ಆರಂಭಿಕ ದಂಡವು 500 ರೂಪಾಯಿಗಳಿದ್ದು, ಮತ್ತೆ ವಿಧಿಸಿದ್ದರೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ವಾಹನ ತಯಾರಕರು ದೃಢಪಡಿಸಿದ ಆನ್‌ಲೈನ್‌ ಪೋರ್ಟಲ್‌ನಲ್ಲಿಯೂ ಬುಕ್‌ ಮಾಡಲು ಅವಕಾಶ ಇರಲಿದ್ದು, ನಕಲಿ ವೆಬ್ ಗಳ ಬಳಕೆ ಮಾಡದಂತೆ ನಿಗಾ ವಹಿಸಿ. ಇದರಿಂದ ಹೆಚ್ಚುವರಿ ಶುಲ್ಕ ವಿಧಿಸುವುದನ್ನು ಕೂಡ ತಡೆಯಬಹುದಾಗಿದೆ. ವಾಹನ ಸವಾರರು ನೋಂದಣಿ ಮಾಡಲುhttps://transport.karnataka.gov.in ಅಥವಾ www.siam.in ಮೂಲಕ ನೋಂದಣಿ ಮಾಡಿ‌.

 

LEAVE A REPLY

Please enter your comment!
Please enter your name here