
ಶಕ್ತಿ ಯೋಜನೆ ಜಾರಿಯಾದ ಬಳಿಕ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಪುರುಷರಿಗೆ, ಕೆಲಸಕ್ಕೆ ತೆರಳುವ ಉದ್ಯೋಗಸ್ಥರಿಗೆ ಸರಿಯಾದ ಸಮಯಕ್ಕೆ ಬಸ್ ಸಿಗ್ತಾ ಇಲ್ಲ, ಬಸ್ ಇದ್ದರೂ ರಷ್ ,ತುಂಬಿ ತುಳುಕುತ್ತಿರುವ ಜನ ಹೀಗೆ ಸಾಕಷ್ಟು ಸಮಸ್ಯೆ, ಇದರಿಂದ ದಿನ ನಿತ್ಯ ಪ್ರಯಾಣ ಮಾಡೋರಿಗೆ ಕಷ್ಟ ಆಗಿದೆ.
ಬಸ್ ಕೊರತೆ ಹೆಚ್ಚಳ
ಈಗಾಗಲೇ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರು ಬಹಳಷ್ಟು ಹೆಚ್ಚಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ಸಿಗದೇ ಪರಾಡುವಂತೆ ಆಗಿದೆ. ಇದಕ್ಕಾಗಿ ಹೆಚ್ಚುವರಿ ಬಸ್ ಒದಗಿಸಲು ಮನವಿ ಸಹ ಕೇಳಿಬಂದಿತ್ತು. ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಇಲ್ಲ, ಇದು ಒಂದು ಸಮಸ್ಯೆ ಆದರೆ ವಿವಿಧ ಹಳ್ಳಿಗಳ ಕಡೆ ಸರ್ಕಾರಿ ಬಸ್ ಕೂಡ ಇಲ್ಲದಂತಾಗಿದೆ. ಕೆಲವು ಗ್ರಾಮೀಣ ಭಾಗದ ರಸ್ತೆಗಳು ವ್ಯವಸ್ಥಿತವಾಗಿದ್ದರೂ ಆ ಗ್ರಾಮಗಳಲ್ಲಿ ಬಸ್ ವ್ಯವಸ್ಥೆ ಇಲ್ಲ. ಇದಕ್ಕಾಗಿ ಬಸ್ ಸೇವೆಗೆ ಆಗ್ರಹಿಸಿ ವಿವಿಧ ಕಡೆ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ಮಾಡಿದ್ದಾರೆ.
ಹೆಚ್ಚುವರಿ ಬಸ್ ಸೇರ್ಪಡೆ
ಇದೀಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ಸೇವೆ ನೀಡುವ ದಾಗಿ ತಿಳಿಸಿದೆ. ಹೊಸ ಮಾರ್ಗಗಳಲ್ಲಿ , ವಿದ್ಯಾರ್ಥಿ ಗಳಿಗೆ ಅನುಕೂಲವಾಗುವಂತೆ ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಬಸ್ ಗಳ ಸೇವೆ ಹಾಕಿ ಅವಶ್ಯಕತೆಯಿರುವ ಮಾರ್ಗಗಳ ಬಗ್ಗೆ ಪರಿಶೀಲಿಸಿ ಬಸ್ ಸೌಕರ್ಯ ಒದಗಿಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ
ಬಸ್‌ಗಳ ಕೊರತೆ ಹೋಗಲಾಡಿಸಲು ಹೊಸ ಬಸ್ ಖರೀದಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ 814 ಹೊಸ ಬಸ್‌ಗಳ ಸೇರ್ಪಡೆ ಜೊತೆಗೆ 977 ಹಳೇ ಬಸ್‌ಗಳನ್ನು ಪುನಶ್ಚೇತನ ಮಾಡುವ ಮೂಲಕ ರಸ್ತೆಗೆ ಇಳಿಸಲಾಗುತ್ತದೆ. ಇದರಲ್ಲಿ 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, 20 ಅಂಬಾರಿ, 20 ಐರಾವತ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದು, ಸರ್ಕಾರ ಕೂಡ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.
