ಯಾದಗಿರಿ: ಒಂದೇ ಒಂದು ವಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಉರುಳುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರುವುದು ಕಷ್ಟ. ಅವರು ರಾಜೀನಾಮೆ ಕೊಡ್ತಾರೆ. ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂತ ಹೇಳಿದ್ದರು. ಮೊನ್ನೆ ರಾತ್ರಿಯೇ ಜಗ್ಗಿದು ಆಯ್ತು. ಬಗ್ಗಿದು ಆಯ್ತು. ಇನ್ನೆನೂ ಉಳಿದಿದೆ ಎಂದು ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ ಸರ್ಕಾರ ಬಿದ್ದ ಹಾಗೇ ಅಲ್ಲವಾ. ಈ ಸರ್ಕಾರ ರಾಜ್ಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದು ಪಾಪದ ಸರ್ಕಾರ. ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನಲ್ಲೇ ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು. ಯಾಕೆಂದರೆ 77 ವರ್ಷ ಜೈಲಿನಲ್ಲಿ ಇಟ್ಟುಕೊಂಡ ಹಾಗೇ ಕಬ್ಜಾ ಮಾಡಿಕೊಂಡು ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ ಎಂದು ದೂರಿದರು.
