Home ಸುದ್ದಿಗಳು ಪ್ಯಾಲೆಸ್ತೇನ್ ಧ್ವಜ ಹಿಡಿದು ಬೈಕ್​ನಲ್ಲಿ ರೌಂಡ್ಸ್ ಹಾಕಿದ ಪ್ರಕರಣ: 6 ಮಂದಿಯ ವಿರುದ್ಧ ಪ್ರಕರಣ ದಾಖಲು

ಪ್ಯಾಲೆಸ್ತೇನ್ ಧ್ವಜ ಹಿಡಿದು ಬೈಕ್​ನಲ್ಲಿ ರೌಂಡ್ಸ್ ಹಾಕಿದ ಪ್ರಕರಣ: 6 ಮಂದಿಯ ವಿರುದ್ಧ ಪ್ರಕರಣ ದಾಖಲು

0
ಪ್ಯಾಲೆಸ್ತೇನ್ ಧ್ವಜ ಹಿಡಿದು ಬೈಕ್​ನಲ್ಲಿ ರೌಂಡ್ಸ್ ಹಾಕಿದ ಪ್ರಕರಣ: 6 ಮಂದಿಯ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು: ಯುವಕರ ತಂಡವೊಂದು ಪ್ಯಾಲೆಸ್ತೇನ್ ಧ್ವಜವನ್ನು ಹಿಡಿದು ಬೈಕ್​ನಲ್ಲಿ ರೌಂಡ್ಸ್ ಹಾಕಿದ ಘಟನೆ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ನಡೆದಿದೆ.ಈ ಘಟನೆಗೆ ಸಂಬಧಿಸಿದ್ದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ರೌಂಡ್ಸ್​ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ಯಾಲೆಸ್ತೇನ್ ಧ್ವಜ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 198ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಮೇಲೆ ಬಿ.ಎನ್.ಎಸ್. 196 (1), 61(2)b ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈದ್​ ಮಿಲಾದ್​ ಬ್ಯಾನರ್​ನಲ್ಲಿ ಫ್ರೀ ಪ್ಯಾಲೆಸ್ತೇನ್ ಬರಹ: ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಲ್ಲಾ ಏರಿಯಾದಲ್ಲಿ ಈದ್​ ಮಿಲಾದ್​ ಹಬ್ಬ ಆಚರಣೆ ಹಿನ್ನೆಲೆ ಬ್ಯಾನರ್ ಅಳವಡಿಸಲಾಗಿತ್ತು. ಆ ಬ್ಯಾನರ್​ನ ಒಂದು ಭಾಗದಲ್ಲಿ ಫ್ರೀ ಪ್ಯಾಲೆಸ್ತೇನ್ಎಂದು ಬರೆಯಲಾಗಿತ್ತು. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಬರಹಕ್ಕೆ ಬಿಳಿ ಬಣ್ಣ ಬಳಿದು ಪ್ಯಾಚ್ ಹಾಕಿದ್ದರು. ಸದ್ಯ ಇದೀಗ ಬ್ಯಾನರ್ ಅನ್ನು ಬದಲಾಯಿಸಿ ಹೊಸ ಬ್ಯಾನರ್ ಅಳವಡಿಸಲಾಗಿದೆ.

 

LEAVE A REPLY

Please enter your comment!
Please enter your name here