ಕೊಪ್ಪಳ: ಗೌರಿ ಕೊಪ್ಪಳ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಡವಟ್ಟು ಘಟನೆಯೊಂದು ನಡೆದಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ನಿವಾಸಿಯಾಗಿರುವ ಗೌರಿ ಅವರಿಗೆ ಹೆಣ್ಣು ಮಗು ಜನಿಸಿರುವುದಾಗಿ ತಿಳಿಸಿ ಸತ್ತಿರುವ ಗಂಡು ಮಗುವನ್ನು ನೀಡಿ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ಸೆ.23 ರಂದು ಗೌರಿ ಕೊಪ್ಪಳ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಸೆ.25 ರಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೆರಿಗೆಯಾಗಿತ್ತು. ಆ ವೇಳೆ ಹೆಣ್ಣು ಮಗು ಜನಿಸಿರುವುದಾಗಿ ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದರು.
ಬಳಿಕ ಮಗುವಿನ ತೂಕ ಕಡಿಮೆ ಇದೆ ಎಂದು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ನಿಮ್ಮ ಮಗು ಸಾವನ್ನಪ್ಪಿದೆ. ಮಗುವನ್ನು ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು.
ಮಗುವಿನ ಮುಖ ನೋಡಬೇಕು ಎಂದು ತೀವ್ರ ನಿಗಾ ಘಟಕಕ್ಕೆ ತೆರಳಿದ್ದರು. ಆದರೆ ಆ ಸಮಯದಲ್ಲಿ ಮೃತಪಟ್ಟಿರುವ ಮಗು ಹೆಣ್ಣಲ್ಲಾ, ಗಂಡು ಎನ್ನುವುದಾಗಿ ತಿಳಿದಿದೆ. ಹೀಗಾಗಿ ನಮ್ಮದು ಹೆಣ್ಣು ಮಗು ಆದರೆ ಇಲ್ಲಿ ಸತ್ತಿರುವುದು ಗಂಡು ಮಗು. ನಮ್ಮ ಮಗು ನಮಗೆ ಬೇಕು ಎಂದು ಮಗುವಿನ ತಾಯಿ ಹಠ ಹಿಡಿದಿದ್ದಾರೆ.
ನಿಮಗೆ ಆಗಿರುವುದು ಗಂಡು ಮಗುವೇ ಆದರೆ ಕ್ಲರಿಕಲ್ ಎರರ್‌ನಿಂದ ಹೀಗಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
