Home ಸುದ್ದಿಗಳು ಚಿಕನ್‌ ಸೆಂಟರ್‌ನಲ್ಲಿ ಅಕ್ರಮ ಮದ್ಯ ದಾಸ್ತಾನು: ಓರ್ವನ ವಿರುದ್ಧ ಪ್ರಕರಣ ದಾಖಲು

ಚಿಕನ್‌ ಸೆಂಟರ್‌ನಲ್ಲಿ ಅಕ್ರಮ ಮದ್ಯ ದಾಸ್ತಾನು: ಓರ್ವನ ವಿರುದ್ಧ ಪ್ರಕರಣ ದಾಖಲು

Theft of gold jewelery worth Rs 10.08 lakh

ಸುಳ್ಯ: ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಚಿಕನ್‌ ಸೆಂಟರ್‌ನಲ್ಲಿ ಅಕ್ರಮವಾಗಿ ಮದ್ಯ ಇರಿಸಿಕೊಂಡಿದ್ದು, ಪೊಲೀಸರು ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಸುಳ್ಯ ಪೊಲೀಸರು ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಚಿಕನ್‌ ಸೆಂಟರ್‌ಗೆ ದಾಳಿ ನಡೆಸಿದ್ದರು.

ದಾಳಿ ವೇಳೆ ಅಲ್ಲಿದ್ದ ದಿನೇಶ್‌ ಗುತ್ತಿಗಾರು ಅವರನ್ನು ವಿಚಾರಿಸಿ ತಪಾಸಣೆ ನಡೆಸಿದ ವೇಳೆ ಅಂಗಡಿಯ ಒಳಗೆ ಹಳೆಯ ಪ್ಲಾಸ್ಟಿಕ್‌ ಚೀಲದಲ್ಲಿ ಒಟ್ಟು 3.960 ಲೀಟರ್‌ ಮದ್ಯ ತುಂಬಿದ ಸ್ಯಾಚೆಟ್‌ಗಳು ಪತ್ತೆಯಾಗಿದೆ.

ವೈನ್‌ಶಾಪ್‌ನಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಂದು ಸಂಗ್ರಹ ಮಾಡಿಟ್ಟುಕೊಂಡಿರುವುದಾಗಿ ವ್ಯಕ್ತಿ ತನಿಖೆ ವೇಳೆ ತಿಳಿಸಿದ್ದಾರೆ.

ಅಪಾದಿತ ದಿನೇಶ್‌ ವಿರುದ್ಧ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
Previous articleಕಾಂತಾರ ಚಿತ್ರ ತಂಡದ ವಾಹನ ಅಪಘಾತ: ವಾಹನದಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯ
Next articleತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ