ಮಂಗಳೂರು: ಕಾನೂನು ಬಾಹಿರವಾಗಿ ಮದ್ಯ ಸಾಗಾಟ, ಮಾರಾಟ ಮತ್ತು ದಾಸ್ತಾನು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ನಿರಪರಾಧಿ ಎಂದು ನ್ಯಾಯಾಲಯ ಆದೇಶಿಸಿದೆ.
ಕೋಡಿಕಲ್ ನಿವಾಸಿ ರಿತೇಶ್ ಕೊರೊನಾ ಸಮಯದಲ್ಲಿ ಕೋಡಿಕಲ್ ಬಳಿ ದ್ವಿಚಕ್ರ ವಾಹನದಲ್ಲಿ ಮದ್ಯದ ಸ್ಯಾಚೆಟ್‌ಗಳನ್ನು ಸಾಗಾಟ ಮಾಡುತ್ತಿದ್ದ. ಇದನ್ನು ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ನಿರೀಕ್ಷಣ ಜಾಮೀನು ಪಡೆದು ಅನಂತರ ನ್ಯಾಯಾಲಯಕ್ಕೆ ಹಾಜರಾಗಿದ್ದ.
ಸಾಕ್ಷಿ ಹೇಳಿಕೆಗಳನ್ನು ಗಮನಿಸಿ, ವಾದ ಪ್ರತಿವಾದವನ್ನು ಆಲಿಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯ ಆರೋಪಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ.
