Home ಸುದ್ದಿಗಳು ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

0
ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

ಉಡುಪಿ: ಉಡುಪಿಯ ಹೃದಯ ಭಾಗದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ಖ್ಯಾತ ಹೋಟೆಲ್ ಉದ್ಯಮಿ ಜಯರಾಮ್ ಬನಾನ್ ಅವರ ಓಶಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೋಟೆಲ್ ನ‌ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು ಜಂಟಿಯಾಗಿ ಹೋಟೆಲ್ ಅನ್ನು ಉದ್ಘಾಟಿಸಿದರು.

Inauguration of 'The Ocean Pearl Times Square' in Udupi

ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀ ಕೃಷ್ಣನ ಉಡುಪಿಗೆ ಜಯರಾಮ್ ಬನಾನ್ ಅವರು ಈ ಹೋಟೆಲ್ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇದರಿಂದ ವ್ಯವಹಾರಿಕವಾಗಿ ಉಡುಪಿ ಮತ್ತಷ್ಟು ಬೆಳೆಯುತ್ತದೆ. ಶ್ರೀ ಕೃಷ್ಣನ ಅನುಗ್ರಹದಿಂದ ನೂತನ ಹೋಟೆಲ್ ಉದ್ಯಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

Inauguration of 'The Ocean Pearl Times Square' in Udupi

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿ, ಉಡುಪಿ ಆಹಾರೋದ್ಯಮದಲ್ಲಿ ಪ್ರಸಿದ್ದವಾಗಿದೆ. ಆದರಿಂದ ಇಂತಹ ಹೋಟೆಲ್ ಉಡುಪಿಗೆ ಅಗತ್ಯವಿತ್ತು‌. ಬಹಳ ಪರಿಶ್ರಮಿಯಾಗಿರುವ ಜಯರಾಮ್ ಬನಾನ್ ಅವರು, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು, ತಮ್ಮ ಸಮರ್ಥ ಆಡಳಿತದಿಂದ ಯಶಸ್ವಿಯಾಗಿದ್ದಾರೆ. ಉಡುಪಿಯಲ್ಲಿ ಅವರ ಉದ್ಯಮ ಯಶಸ್ಸು ಕಾಣಲಿ ಎಂದರು.

Inauguration of 'The Ocean Pearl Times Square' in Udupi

ಉದ್ಘಾಟನೆಗೂ ಮುನ್ನ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಭೇಟಿ ನೀಡಿ ಹಾರೈಸಿದರು.

Inauguration of 'The Ocean Pearl Times Square' in Udupi

ಸಮಾರಂಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಸುನೀಲ್ ಕುಮಾರ್, ಬಿಜೆಪಿ ಮುಖಂಡ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಗದೀಶ್ ಅಧಿಕಾರಿ, ಓಶಿಯನ್ ಪರ್ಲ್ ಸಂಸ್ಥೆಯ ಸ್ಥಾಪಕರಾದ ಜಯರಾಂ ಬನಾನ್, ಎಮ್.ಡಿ ರೋಷನ್ ಬನಾನ್, ಉಪಾಧ್ಯಕ್ಷರಾದ ಗಿರೀಶ್ ಮತ್ತು ಶಿವಕುಮಾರ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಮಾಲ್ ನ ಮಾಲೀಕ ಡಾ.ಜೆರ್ರಿ ವಿನ್ಸಂಟ್ ಡಯಾಸ್, ಮಾಂಡೋವಿ ಬಿಲ್ಡರ್ಸ್ ನ ಗ್ಲೆನ್ ಡಯಾಸ್, ಜೇಸನ್ ಡಯಾಸ್, ಉದ್ಯಮಿಗಳಾದ ಸಾಯಿರಾಧ ಮನೋಹರ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ, ಇಬ್ರಾಹಿಂ ಕೋಡಿ, ಮಾಜಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here