Home ಸುದ್ದಿಗಳು ಅಸಭ್ಯ ವರ್ತನೆ ತೋರುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳಿಂದ ಕ್ಲಾಸ್‌

ಅಸಭ್ಯ ವರ್ತನೆ ತೋರುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳಿಂದ ಕ್ಲಾಸ್‌

0
ಅಸಭ್ಯ ವರ್ತನೆ ತೋರುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳಿಂದ ಕ್ಲಾಸ್‌

ಬಳ್ಳಾರಿ: ಪರಪ್ಪನ ಅಗ್ರಹಾರಡದಿಂದ ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿದ್ದ ನಟ ದರ್ಶನ್ ಗೆ ಜೈಲಾಧಿಕಾರಿಗಳು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ಮಾಡುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳು ಪಾಠ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನದು ಬೇಕು ಅಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಎಂದು ಜೈಲರ್‌ ಎಚ್ಚರಿಕೆ ನೀಡಿದ್ದಾರೆ.

ಜೈಲಿನಲ್ಲಿ ಇರುವಷ್ಟು ದಿನ ಜೈಲು ನಿಯಮಗಳನ್ನು ಪಾಲನೆ ಮಾಡಬೇಕು. ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here