ನವದೆಹಲಿ: ಯಾವುದೇ ಟ್ವೀಟ್ ನೋಡಲು ಹಾಗೂ ಅದರಲ್ಲಿರುವ ವಿಷಯ ಓದಲು ಕಡ್ಡಾಯವಾಗಿ ಟ್ವಿಟರ್ಗೆ ಸೈನ್ ಇನ್ ಆಗಬೇಕು ಎಂದು ಎಲಾನ್ ಮಾಸ್ಕ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ವೆರಿಫೈಡ್ ಖಾತೆ ಹೊಂದಿರುವ ಗ್ರಾಹಕರು ದಿನಕ್ಕೆ 6 ಸಾವಿರ ಪೋಸ್ಟ್ ನೋಡಬಹುದು. ಸಾಮಾನ್ಯ ಬಳಕೆದಾರರು ದಿನಕ್ಕೆ 600 ಪೋಸ್ಟ್ ನೋಡಬಹುದು. ಹೊಸದಾಗಿ ಖಾತೆ ತೆರೆದಿರುವವರು ದಿನಕ್ಕೆ 300 ಪೋಸ್ಟ್ ನೋಡಬಹುದು. ಇದಕ್ಕಿಂತ ಹೆಚ್ಚಿನ ಪೋಸ್ಟ್ ಅನ್ನು ನೋಡಲು ಟ್ವಿಟರ್ ಗೆ ಸೈನ್ ಇನ್ ಆಗುವುದು ಕಡ್ಡಾಯ ಎಂದು ಎಲಾನ್ ಮಾಸ್ಕ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ಜನರು ಇಷ್ಟು ದಿನ ನೇರವಾಗಿ ಟ್ವೀಟ್ ಕ್ಲಿಕ್ ಮಾಡಿದರೆ ಅದನ್ನು ನೇರವಾಗಿ ನೋಡಬಹುದಿತ್ತು. ಆದರೆ ಇನ್ನು ಮುಂದೆ ಸೈನ್ ಇನ್ ಆಗದೇ ಕೆಲವೇ ಕೆಲವು ಪೋಸ್ಟ್ ಗಳನ್ನು ಮಾತ್ರ ಓದಲು ಸಾಧ್ಯ ಎನ್ನಲಾಗಿದೆ.
