Home ಅಂತರಾಷ್ಟ್ರೀಯ ಏಷ್ಯಾ ಕಪ್‌ ವಿಚಾರದಲ್ಲಿ ಪಾಕ್‌ ಗೆ ಮತ್ತೆ ಮುಖಭಂಗ

ಏಷ್ಯಾ ಕಪ್‌ ವಿಚಾರದಲ್ಲಿ ಪಾಕ್‌ ಗೆ ಮತ್ತೆ ಮುಖಭಂಗ

ಪಾಕಿಸ್ತಾನ:ಇತ್ತೀಚೆಗೆ ಭಾರತವು ಯಾವುದೇ ಕಾರಣಕ್ಕೂ ನಾವು ಪಾಕಿಸ್ತಾನಕ್ಕೆ ಹೋಗಿ ಏಷ್ಯಾ ಕಪ್ ಅನ್ನು ಆಡುವುದಿಲ್ಲ. ಒಂದು ವೇಳೆ ಏಷ್ಯಾ ಕಪ್ ನಡೆಯುವುದೇ ಆಗಿದ್ದರೆ ತಟಸ್ಥ ಸ್ಥಳದಲ್ಲಿ ಮಾಡಿದರೆ ಮಾತ್ರ ನಾವು ಭಾಗವಹಿಸುತ್ತೇವೆ ಎಂದು ಹೇಳಿತ್ತು. ಆದರೆ ಇದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಉಳಿದ ದೇಶಗಳೂ ಕೂಡ ಭಾರತದ ಬೆಂಬಲಕ್ಕೆ ನಿಂತಿದ್ದು, ಪಾಕ್‌ ಗೆ ಮುಖಭಂಗವನ್ನುಂಟು ಮಾಡಿದೆ.
ಹೌದು, ಭಾರತದ ನಿಲುವನ್ನು ವಿರೋಧಿಸಿದ್ದ ಪಾಕಿಸ್ತಾನ ಭಾರತದ ವಿರುದ್ಧ ನಡೆಯುವ ಪಂದ್ಯಗಳನ್ನು ಬೇಕಾದರೆ ತಟಸ್ಥ ಸ್ಥಳಗಳಲ್ಲಿ ಇಟ್ಟು ಉಳಿದ ದೇಶಗಳ ಪಂದ್ಯವನ್ನು ಪಾಕಿಸ್ತಾನದಲ್ಲಿ ಮಾಡುವಂತೆ ಐಸಿಸಿ ಅವರಲ್ಲಿ ಕೇಳಿಕೊಂಡಿತ್ತು. ಆದರೆ ಇದಕ್ಕೆ ಭಾರತದ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು. ಆದರೂ ಸಹ ಪಾಕಿಸ್ತಾನದ ಪಿಸಿಬಿ ಅವರು ಭಾರತವನ್ನು ಹೊರೆತುಪಡಿಸಿ ಇನ್ನೂ ಉಳಿದ ಮೂರು ದೇಶಗಳೊಂದಿಗೆ ಸಲಹೆ ಪಡೆಯಲು ಯೋಚಿಸಿತ್ತು. ಆದರೆ ಶ್ರೀಲಂಕಾ ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನವು ಇದನ್ನು ತಿರಸ್ಕರಿಸಿ ಭಾರತದ ಬೆಂಬಲಕ್ಕೆ ನಿಂತಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಎರಡೇ ಎರಡು ಅವಕಾಶ ಇದೆ ಅದೇನೆಂದರೆ ಒಂದೇ ತಟಸ್ಥ ಸ್ಥಳದಲ್ಲಿ ಏಷ್ಯಾ ಕಪ್ ಅನ್ನು ಆಡುವುದು ಇಲ್ಲದಿದ್ದರೆ ಏಷ್ಯಾ ಕಪ್‌ ಅನ್ನು ಆಡದೇ ಇರುವುದು. ಹೀಗಾಗಿ ಸದ್ಯದ ಪರಿಸ್ಥಿತಿ ನೋಡಿದರೆ ಏಷ್ಯಾ ಕಪ್ ನಡೆಯುವುದು ಕಷ್ಟಸಾಧ್ಯ ಎನ್ನುವಂತಾಗಿದೆ.

 
Previous articleಶಕ್ತಿ ಯೋಜನೆ ವಿರುದ್ಧ ಖಾಸಗಿ ಬಸ್‌ ಮಾಲೀಕರ ಅಪಸ್ವರ
Next articleಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಪ್ರಕಟ