Home ಅಂತರಾಷ್ಟ್ರೀಯ ಭೂಕಂಪನದಿಂದ ನಲುಗುತ್ತಿದೆ ಅಫ್ಘಾನಿಸ್ತಾನ: ಇಂದು ಮತ್ತೆ 6.1ತೀವ್ರತೆಯ ಪ್ರಬಲ ಭೂಕಂಪ

ಭೂಕಂಪನದಿಂದ ನಲುಗುತ್ತಿದೆ ಅಫ್ಘಾನಿಸ್ತಾನ: ಇಂದು ಮತ್ತೆ 6.1ತೀವ್ರತೆಯ ಪ್ರಬಲ ಭೂಕಂಪ

ಅಫ್ಘಾನಿಸ್ತಾನ: ಈಗಾಗಲೇ ಸಾಲು ಸಾಲು ಭೂಕಂಪಗಳಿಂದ ತತ್ತರಿಸಿ ಹೋಗಿರುವ ಅಫ್ಘಾನಿಸ್ತಾನದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪನ ಸಂಭವಿಸಿದೆ.

ಇಂದು ಬೆಳಿಗ್ಗೆ 6:11ರ ಸುಮಾರಿಗೆ ಹೆರಾತ್‌ ರಾಜಧಾನಿಯಿಂದ ಸುಮಾರು 28 ಕಿ.ಮೀ ದೂರದಲ್ಲಿ 6.1ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದಿಂದ 465 ಮನೆಗಳೂ ಸಂಪೂಣವಾಗಿ ನೆಲಸಮವಾಗಿದ್ದು, 135ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ ಎಂದು ಹೇಳಲಾಗಿದೆ.

ಇನ್ನು, ಇಂದು ನಡೆದ ಭೂಕಂಪನದಲ್ಲಿ ಸಂಭವಿಸಿರುವ ಪ್ರಾಣಹಾನಿಯ ಕುರಿತು ಯಾವುದೇ ವರದಿಯಾಗಿಲ್ಲ. ಸರಣಿ ಭೂಕಂಪದಿಂದಾಗಿ ವಿದ್ಯುತ್‌ ಸಂಪರ್ಕ, ದೂರವಾಣಿ ಕಡಿತಗೊಂಡಿರುವ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ತೊಡಕನ್ನುಂಟು ಮಾಡಿದ್ದು, ಈವರೆಗೆ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ.

 
Previous articleಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ
Next articleಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌