ಟೊರೊಂಟೊ: ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಡೆಲ್ಟಾ ವಿಮಾನ ರನ್‌ವೇ ತಲೆಕೆಳಗಾಗಿ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ಗಾಯಗಳಾಗಿವೆ. ಅಗ್ನಿಶಾಮಕ ಮುಖ್ಯಸ್ಥ ಟಾಡ್ ಐಟ್ಕೆನ್ ಪ್ರಕಾರ, ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದ ನಂತರ ಕನಿಷ್ಠ 18 ಜನರು ಗಾಯಗೊಂಡಿದ್ದಾರೆ.
ಮಿನ್ನಿಯಾಪೋಲಿಸ್‌ನಿಂದ 80 ಜನರಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವು ರನ್‌ವೇಯಲ್ಲಿ ತಲೆಕೆಳಗಾಗಿ ಲ್ಯಾಂಡ್ ಆಗಿದ್ದು ಪ್ರಯಾಣಿಕರು “ಬಾವಲಿಗಳಂತೆ” ನೇತಾಡುತ್ತಿರುವುದನ್ನು ಪ್ರಯಾಣಿಕನೊಬ್ಬ ವಿವರಿಸಿದ್ದಾನೆ.
ಅಪಘಾತದಲ್ಲಿ ಪ್ರಾಣಹಾನಿಯಾಗಿಲ್ಲ. ವಿಮಾನ ವಿನ್ಯಾಸ ಮತ್ತು ಸೀಟ್ ಸುರಕ್ಷತೆಯಲ್ಲಿನ ಮುಂದುವರಿದ ತಂತ್ರಜ್ಞಾನದಿಂದಾಗಿ ದುರಂತವೊಂದು ತಪ್ಪಿತು ಎಂದು ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಅಪಘಾತದ ಕಾರಣವನ್ನು ಪರಿಶೀಲಿಸುವುದರಿಂದ ಮುಂದಿನ ಕೆಲವು ದಿನಗಳವರೆಗೆ ಎರಡು ರನ್‌ವೇಗಳು ಮುಚ್ಚಲ್ಪಡುತ್ತವೆ ಎಂದು ವಿಮಾನ ನಿಲ್ದಾಣದ ಸಿ.ಇ.ಒ ಡೆಬೊರಾ ಫ್ಲಿಂಟ್ ತಿಳಿಸಿದ್ದಾರೆ.
