Home ಅಂತರಾಷ್ಟ್ರೀಯ ಅಮೇರಿಕಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಭೇಟಿಯಾದ ಪ್ರಧಾನಿ ಮೋದಿ

ಅಮೇರಿಕಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಭೇಟಿಯಾದ ಪ್ರಧಾನಿ ಮೋದಿ

ವಾಷಿಂಗ್ಟನ್ ಡಿಸಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸ್ಥಳೀಯ ಕಾಲಮಾನ) ವಾಷಿಂಗ್ಟನ್ ಡಿಸಿಗೆ ಆಗಮಿಸಿದರು. ಅವರು ಅಮೇರಿಕಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರನ್ನು
ಭೇಟಿಯಾದರು.

ತುಳಸಿ ಗಬ್ಬಾರ್ಡ್ ಹಲವು ಸಂದರ್ಭಗಳಲ್ಲಿ ಭಾರತ ಪರ ನಿಲುವುಗಳನ್ನು ತಳೆದಿದ್ದು, ಭಾರತ ಮತ್ತು ಅಮೇರಿಕಾದ ದೀರ್ಘಕಾಲೀನ ಮಿತೃತ್ವವನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದವೂ ಅವರು ಧ್ವನಿ ಎತ್ತಿದ್ದಾರೆ. ತುಳಸಿ ಗಬ್ಬಾರ್ಡ್ ಅಮೇರಿಕಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆಯಾಗಿ ನೇಮಕವಾಗಿರುವುದು ಹಲವರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಅಮೇರಿಕಾದ ಜೊತೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿ ಭೇಟಿಯು ಹೆಚ್ಚಿನ ಮಹತ್ವ ಪಡೆದಿದೆ. ಕಳೆದೊಂದು ವಾರದಲ್ಲಿ ಅಮೇರಿಕಾ ಅಧ್ಯಕ್ಷ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಜೋರ್ಡನ್ ನ ರಾಜ ಅಬ್ದುಲ್ಲಾ-2 ಮುಂತಾದ ರಾಷ್ಟ್ರನಾಯಕರನ್ನು ಭೇಟಿ ಮಾಡಿ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿದ್ದು ಯಾವೆಲ್ಲಾ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ವಿಶ್ವವು ಎದುರು ನೋಡುತ್ತಿದೆ.

 

 

 
Previous articleರಾಷ್ಟ್ರರಾಜಧಾನಿಯಲ್ಲಿ ಕೆಡ್ಡಸದ ಕಮ್ಮೆನ… ಸಂಸದ ಬ್ರಿಜೇಶ್ ಚೌಟ ಭಾಗಿ
Next articleಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜನಪದ ಗಾಯಕಿ ಸುಕ್ರಿ ಬೊಮ್ಮನ ಗೌಡ ಇನ್ನಿಲ್ಲ