Home ಅಂತರಾಷ್ಟ್ರೀಯ MAGA ಮೀಟ್ಸ್ MIGA; ಭಾರತ-ಅಮೇರಿಕಾ MEGA ಪಾಲುದಾರಿಕೆಯಿಂದ ಸಮೃದ್ದಿ: ಪ್ರಧಾನಿ ಮೋದಿ

MAGA ಮೀಟ್ಸ್ MIGA; ಭಾರತ-ಅಮೇರಿಕಾ MEGA ಪಾಲುದಾರಿಕೆಯಿಂದ ಸಮೃದ್ದಿ: ಪ್ರಧಾನಿ ಮೋದಿ

ವಾಷಿಂಗ್ಟನ್ ಡಿಸಿ: ವಿಶ್ವವೇ ಎದುರು ನೋಡುತ್ತಿದ್ದ ಘಳಿಗೆಗೆ ಕಾಲ ಕೂಡಿ ಬಂತು. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಭೇಟಿಗಾಗಿ ವಿಶ್ವವೇ ಕಾತರದಿಂದ ಕಾಯುತ್ತಿತ್ತು. ಘನಿಷ್ಠ ಮಿತ್ರರೆಂದೇ ಹೆಸರುವಾಸಿಯಾದ ಮೋದಿ-ಟ್ರಂಪ್ ಜೋಡಿ ಯಾವೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.

ಟ್ರಂಪ್ ಎರಡನೇ ಬಾರಿಗೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅವರನ್ನು ಭೇಟಿ ಮಾಡುತ್ತಿದ್ದಾರೆ.

ಇಬ್ಬರು ನಾಯಕರೂ ಮಾಡಿದರು ಹಸ್ತಲಾಘವ ಮಾಡಿಕೊಂಡು ಮತ್ತು ಒಬ್ಬರನ್ನೊಬ್ಬರು ತಬ್ಬಿಕೊಂಡರು. ಮೋದಿಯನ್ನು ಅಪ್ಪಿಕೊಂಡ ಟ್ರಂಪ್ “ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇವೆ” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಅಧ್ಯಕ್ಷ ಟ್ರಂಪ್ ಯಾವಾಗಲೂ ತನ್ನ ದೇಶವನ್ನು ಮೊದಲ ಸ್ಥಾನದಲ್ಲಿರಿಸುತ್ತಾರೆ ಎಂಬುದನ್ನು ನಾನು ಪ್ರಶಂಸಿಸುತ್ತೇನೆ. ನಾನೂ ಅದೇ ರೀತಿ ಮಾಡುತ್ತೇನೆ. ನಮ್ಮಿಬ್ಬರಲ್ಲಿಯೂ ಇರುವ ಸಾಮಾನ್ಯ ಅಂಶ ಇದಾಗಿದೆ ಎಂದರು.

ಟ್ರಂಪ್ MAGA (ಮೇಕ್ ಅಮೇರಿಕಾ ಗ್ರೇಟ್ ಅಗೈನ್) ಬಗ್ಗೆ ಮಾತಾಡುತ್ತಾರೆ. ನಾವು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತೇವೆ. ಅಂದರೆ MIGA (ಮೇಕ್ ಇಂಡಿಯಾ ಗ್ರೇಟ್ ಅಗೈನ್). MAGA ಮತ್ತು MIGA ಸೇರಿದರೆ MEGA ಪಾಲುದಾರಿಕೆಯಿಂದ ಸಮೃದ್ದಿ ಉಂಟಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಬಾಂಗ್ಲಾದೇಶದ ವಿಷಯದಲ್ಲಿ ಅಮೇರಿಕಾದ ಪಾತ್ರವಿಲ್ಲ, ಅದು ಭಾರತಕ್ಕೆ ಬಿಟ್ಟ ವಿಷಯ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು.

ಭಾರತ ಮತ್ತು ಅಮೇರಿಕಾ ನಡುವೆ ವ್ಯಾಪಾರ, ಸುಂಕ, ವಲಸೆ, ಹೂಡಿಕೆ, ಶಕ್ತಿ, ರಕ್ಷಣೆ, ತಂತ್ರಜ್ಞಾನ, ವೀಸಾ ನೀಡಿಕೆ ಮುಂತಾದ ಹಲವು ವಿಷಯಗಳಲ್ಲಿ ದ್ವಿಪಕ್ಷೀಯ ಮಾತುಗಳು ನಡೆದವು.

ಪ್ರಧಾನಿ ಮೋದಿ ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್, ವಾಷಿಂಗ್ಟನ್‌ನ ಬ್ಲೇರ್ ಹೌಸ್‌ನಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್, ರಿಪಬ್ಲಿಕನ್ ಪಕ್ಷದ ನಾಯಕ ವಿವೇಕ್ ರಾಮಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ.

 

 

 

 
Previous articleರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ನಾಯಕ: ಈ ಬಾರಿಯಾದರೂ ಕಪ್ ನಮ್ದಾಗುತ್ತಾ?
Next articleಫೆ. 17ರಂದು ಉಡುಪಿಯಿಂದ ಪ್ರಯಾಗರಾಜ್ ಗೆ ಮಹಾಕುಂಭ ವಿಶೇಷ ರೈಲು: ಕೋಟ ಶ್ರೀನಿವಾಸ್ ಪೂಜಾರಿ