ಪ್ಯಾರಿಸ್: ಪ್ರಧಾನಿ ಮೋದಿ ಸೋಮವಾರದಂದು ಫ್ರಾನ್ಸ್‌ಗೆ ಆಗಮಿಸಿದ್ದು, ಮಂಗಳವಾರ ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ. ತದನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮೊದಲ ಭೇಟಿಗಾಗಿ ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ.
ನಾವೀನ್ಯತೆ ಮತ್ತು ಹೆಚ್ಚಿನ ಸಾರ್ವಜನಿಕ ಒಳಿತಿಗಾಗಿ AI ತಂತ್ರಜ್ಞಾನದ ಸಹಯೋಗದ ವಿಧಾನದ ಕುರಿತು ನಾವು ನಮ್ಮ ಅಭಿಪ್ರಾಯಗಳನ್ನು ಅಂತರ್ಗತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳಲಿದ್ದೇವೆ ಎಂದು ಫ್ರಾನ್ಸ್ ಗೆ ತೆರಳುವ ಮುನ್ನ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಮೂರನೇ ಶೃಂಗಸಭೆಯಲ್ಲಿ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ , ಚೀನಾದ ಉಪಾಧ್ಯಕ್ಷ ಜಾಂಗ್ ಗುವೊಕಿಂಗ್ ಅವರಂತಹ ವಿಶ್ವ ನಾಯಕರು ಭಾಗವಹಿಸಲಿದ್ದಾರೆ. ಜೊತೆಗೆ ಟೆಕ್ ದಿಗ್ಗಜರಾದ ಸ್ಯಾಮ್ ಆಲ್ಟ್ ಮನ್, ಸುಂದರ್ ಪಿಚೈ ಮತ್ತು ಅರಂವಿದ್ ಶ್ರೀನಿವಾಸ್ ಮುಂತಾದವರೂ ಉಪಸ್ಥಿತರಿರಲಿದ್ದಾರೆ.
