ರೋಮ್: ಇಲ್ಲಿನ ಧಾರ್ಮಿಕ ಕ್ಷೇತ್ರದ ವ್ಯಾಟಿಕನ್ ನ ಧರ್ಮಗುರು ಪೋಪ್ ಫ್ರಾನ್ಸಿಸ್ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿರುವ ವರದಿಗಳಾಗಿವೆ. ಶುಕ್ರವಾರ ಮಧ್ಯಾಹ್ನ ಶ್ವಾಸಕೋಶದ ಪ್ರತ್ಯೇಕ ತೊಂದರೆಯ ನಂತರ ಪೋಪ್ ಫ್ರಾನ್ಸಿಸ್ ಅವರ ಸ್ಥಿತಿ ಹಠಾತ್ ಹದಗೆಟ್ಟಿದೆ. ಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಮತ್ತು ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವ್ಯಾಟಿಕನ್ ಮಾಹಿತಿ ನೀಡಿದೆ.
ಶ್ವಾಸಕೋಶದ ಸಣ್ಣ ವಾಯುಮಾರ್ಗಗಳಲ್ಲಿ ಸ್ನಾಯುಗಳನ್ನು ಬಿಗಿಗೊಳಿಸಿ ಉಸಿರಾಟವನ್ನು ಕಷ್ಟಕರವಾಗಿಸುವ ‘ಬ್ರಾಂಕೋಸ್ಪಾಸ್ಮ್’ ನಿಂದಾಗಿ ಪೋಪ್ ಆರೋಗ್ಯ ಹದಗೆಟ್ಟಿದೆ. ಇದರಿಂದಾಗಿ ವಾಂತಿಯಾಗಿದ್ದು, ಉಸಿರಾಟ ಕಷ್ಟವಾಗಿದೆ. ತತ್ ಕ್ಷಣ ಅವರಿಗೆ ಬ್ರಾಂಕೋಆಸ್ಪಿರೇಷನ್ ಮಾಡಲಾಯಿತು ಮತ್ತು ಹಿತವಾದ ಯಾಂತ್ರಿಕ ವಾತಾಯನವನ್ನು ನೀಡಲಾಯಿತು, ಅದಕ್ಕೆ ಅವರು ಉತ್ತಮವಾಗಿ ಪ್ರತಿಕ್ರಿಯಿಸಿದರು ಎಂದು ವ್ಯಾಟಿಕನ್ ಹೇಳಿದೆ.
