Home ಅಂತರಾಷ್ಟ್ರೀಯ ಜಲಾವೃತಗೊಂಡ ರಷ್ಯಾ ಆಕ್ರಮಿತ ಉಕ್ರೇನ್‌ ನಗರ: ರಷ್ಯಾ ವಿರುದ್ಧ ಉಕ್ರೇನ್‌ ಆರೋಪ

ಜಲಾವೃತಗೊಂಡ ರಷ್ಯಾ ಆಕ್ರಮಿತ ಉಕ್ರೇನ್‌ ನಗರ: ರಷ್ಯಾ ವಿರುದ್ಧ ಉಕ್ರೇನ್‌ ಆರೋಪ

ಉಕ್ರೇನ್: ಈಗಾಗಲೇ ರಷ್ಯಾ ಮತ್ತು ಉಕ್ರೇನ್ ನಡುವೆ ಆಗಿರುವ ಯುದ್ಧದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಈ ಘೋರವಾದ ಯುದ್ಧದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿತ್ತು. ನಮ್ಮ ರಾಜ್ಯದ ವಿದ್ಯಾರ್ಥಿ ಕೂಡ ಇದಕ್ಕೆ ಬಲಿಯಾಗಿದ್ದರು. ಉಕ್ರೇನನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ರಷ್ಯಾ ಪಡೆಗಳು ದಿನದಿಂದ ದಿನಕ್ಕೂ ದುಷ್ಕೃತ್ಯವನ್ನು ಮುಂದುವರಿಸಿತ್ತು. ಇದೀಗ ಕೆಲವು ಸಮಯಗಳ ಕಾಲ ಶಾಂತ ರೀತಿಯಲ್ಲಿದ್ದ ಉಕ್ರೆನ್‌ ರಷ್ಯಾ ನಡುವಿನ ಜಗಳ ಮತ್ತೆ ಪುಟಿದೆದ್ದಿದೆ.
ಹೌದು, ಉಕ್ರೆನ್‌ ನಲ್ಲಿ ರಷ್ಯಾ ಆಕ್ರಮಿತ ಪ್ರದೇಶದಲ್ಲಿ ಸೇತುವೆ ಒಡೆದು ನಗರವು ಜಲಾವೃತಗೊಂಡಿದೆ. ಇದು ರಷ್ಯಾ ಮಾಡಿರುವ ಸಂಚು ಎಂದು ಉಕ್ರೇನ್‌ ಆರೋಪಿಸಿದೆ. ಆದರೆ, ರಷ್ಯಾ ಈ ಆರೋಪವನ್ನು ಸಂಪೂಣವಾಗಿ ತಳ್ಳಿ ಹಾಕಿದೆ. ಇದು ಸುಳ್ಳು ಸುದ್ದಿ, ಉಕ್ರೇನ್‌ ನವರೇ ತಮ್ಮ ಸೇತುವೆಯನ್ನು ಸ್ಫೋಟಿಸಿಕೊಂಡು ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಹೇಳುತ್ತಿದೆ. ಹೀಗಾಗಿ ಉಕ್ರೇನ್ ಮತ್ತು ರಷ್ಯಾದ ನಡುವೆ ಮತ್ತೆ ಯುದ್ಧ ಸಂಭವಿಸುವ ಲಕ್ಷಣಗಳು ಕಾಣುತ್ತಿವೆ.

 
Previous articleಉಡುಪಿಗೆ ಆಗಮಿಸಿದ ಗೃಹ ಸಚಿವ ಡಾ. ಜಿ‌. ಪರಮೇಶ್ವರ್
Next articleಸಂಬಳ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ: ಸಿಎಂ ಭೇಟಿಗೆ ಮನವಿ