Home ಸುದ್ದಿಗಳು ಅಂತರಾಷ್ಟ್ರೀಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೈಲ್ವೇ ದುರಂತಕ್ಕೆ ಸಂತಾಪ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೈಲ್ವೇ ದುರಂತಕ್ಕೆ ಸಂತಾಪ

0
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೈಲ್ವೇ ದುರಂತಕ್ಕೆ ಸಂತಾಪ

ಲಂಡನ್‌: ಒಡಿಶಾದ ಬಾಲಸೋರ್‌ ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಅನೇಕರು ಕಂಬನಿ ಮಿಡದಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಲವರು ಪರಹಾರವನ್ನು ನೀಡದ್ದಾರೆ. ಇದೀಗ ಲಂಡನ್‌ ನಲ್ಲಿ ನಡೆಯುತ್ತಿರುವ ಎರಡನೇ ವಿಶ್ವ ಚಾಂಪಿಯನ್‌ ಶಿಪ್‌ ಫೈನಾಲ್‌ ಪಂದ್ಯದಲ್ಲಿ ಟೆಸ್ಟ್‌ ವಿಶ್ವಕಪ್‌ ಅರಂಭಕ್ಕೂ ಮುನ್ನ ಕ್ರಿಕೆಟಗರು ಬಾಲಸೋರ್‌ ರೈಲ್ವೇ ದುರಂತಕ್ಕೆ ಸಂತಾಪ ಸೂಚಿಸಿದೆ.
ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಇಂದು ಆರಂಭವಾಗಿದ್ದು, ಭಾರತ ತಂಡವು ಟಾಸ್‌ ಗೆದ್ದು ಮೊದಲು ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದೆ. ಮ್ಯಾಚ್‌ ಪ್ರಾರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರರು ತಮ್ಮ ಎಡಗೈ ತೋಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಸಂತಾಪ ಸೂಚಿಸಿದೆ. ಅಲ್ಲದೇ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಬಾಲಸೋರ್‌ ರೈಲ್ವೇ ದುರಂತದಲ್ಲಿ ಕೊನೆಯುಸಿರೆಳೆದವರಿಗೆ ಸಂತಾಪ ಸೂಚಿಸಲಾಯಿತು.
ಹಿನ್ನೆಲೆ: ಶುಕ್ರವಾರ ಸಂಭವಿಸಿದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 288ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

LEAVE A REPLY

Please enter your comment!
Please enter your name here