Home ಸುದ್ದಿಗಳು ಉಡುಪಿ: ಗೀತೋತ್ಸವ ಉದ್ಘಾಟನೆಗೆ ಕಂಚಿ ಕಾಮಕೋಟಿ ಶ್ರೀಗಳಿಗೆ ಆಹ್ವಾನ

ಉಡುಪಿ: ಗೀತೋತ್ಸವ ಉದ್ಘಾಟನೆಗೆ ಕಂಚಿ ಕಾಮಕೋಟಿ ಶ್ರೀಗಳಿಗೆ ಆಹ್ವಾನ

0
ಉಡುಪಿ: ಗೀತೋತ್ಸವ ಉದ್ಘಾಟನೆಗೆ ಕಂಚಿ ಕಾಮಕೋಟಿ ಶ್ರೀಗಳಿಗೆ ಆಹ್ವಾನ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಆಯೋಜಿಸಿರುವ ಭಗವದ್ಗೀತಾ ಕೋಟಿ ಲೇಖನ ಯಜ್ಞದ ಹಿನ್ನೆಲೆಯಲ್ಲಿ ಬೃಹತ್‌ ಗೀತೋತ್ಸವ ಉದ್ಘಾಟನೆಗೆ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ಆಹ್ವಾನ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರನ್ನು ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿ| ಪ್ರಸನ್ನಾಚಾರ್ಯ ಸಹಿತ ಅಧಿಕಾರಿಗಳು ಭೇಟಿ ಮಾಡಿ ಆಮಂತ್ರಣ ನೀಡಿದರು.

ಪುತ್ತಿಗೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನವನ್ನು ಮನ್ನಿಸಿದ ಕಂಚಿ ಶ್ರೀಗಳು ನ.20ರಂದು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲು ಸಮ್ಮತಿಸಿದರು.

ಇದಕ್ಕೂಮುನ್ನ ಕಂಚಿ ಪೀಠದ ಈ ಹಿಂದಿನ ಯತಿಗಳಾಗಿದ್ದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಪುತ್ತಿಗೆ ಶ್ರೀಪಾದರ ತೃತೀಯ ಪರ್ಯಾಯ ಸಂದರ್ಭದಲ್ಲಿ ಜರಗಿದ್ದ ನವರತ್ನ ರಥ ಉದ್ಘಾಟನೆಗಾಗಿ ಉಡುಪಿಗೆ ಭೇಟಿ ನೀಡಿದ್ದರು.

 

LEAVE A REPLY

Please enter your comment!
Please enter your name here